ಬೆಂಗಳೂರು, ಜು 17 (DaijiworldNews/PY): ಡಬ್ಲ್ಯೂಎಚ್ಒ ಪ್ರತಿ ದಿನ ಪ್ರತಿ ದಶಲಕ್ಷ ಜನಸಂಖ್ಯೆಗೆ ಕನಿಷ್ಠ 140 ಟೆಸ್ಟ್ ಮಾಡಬೇಕೆಂದು ಶಿಫಾರಸ್ಸು ಮಾಡಿದೆ. ಕರ್ನಾಟಕ 297 ಟೆಸ್ಟ್ ಮಾಡುವ ಮೂಲಕ ಈ ಗುರಿ ತಲುಪಿರುವ ಭಾರತದ ಟಾಪ್ 10 ರಾಜ್ಯಗಳ ಪೈಕಿ ಸ್ಥಾನ ಪಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಡಬ್ಲ್ಯೂಎಚ್ಒ ಪ್ರತಿ ದಿನ ಪ್ರತಿ ದಶಲಕ್ಷ ಜನಸಂಖ್ಯೆಗೆ ಕನಿಷ್ಠ 140 ಟೆಸ್ಟ್ ಮಾಡಬೇಕೆಂದು ಶಿಫಾರಸ್ಸು ಮಾಡಿದೆ. ಕರ್ನಾಟಕ 297 ಟೆಸ್ಟ್ ಮಾಡುವ ಮೂಲಕ ಈ ಗುರಿ ತಲುಪಿರುವ ಭಾರತದ ಟಾಪ್ 10 ರಾಜ್ಯಗಳ ಪೈಕಿ ಸ್ಥಾನ ಪಡೆದಿದೆ. ಈವರೆಗೂ ರಾಜ್ಯದಲ್ಲಿ 9.25 ಲಕ್ಷಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗಿದ್ದು ಅವೆಲ್ಲವೂ ನಿಖರ ವರದಿ ನೀಡುವ ಆರ್ಟಿ - ಟಿಸಿಆರ್ ಟೆಸ್ಟ್ ಆಗಿವೆ ಎಂದು ತಿಳಿಸಿದ್ದಾರೆ.