ನವದೆಹಲಿ, ಜು 17 (DaijiworldNews/PY): ದೇಶಾದ್ಯಂತ 6-14 ವರ್ಷದೊಳಗಿನ ಮಕ್ಕಳಿಗೆ ಸಾಮಾನ್ಯ ಪಠ್ಯಕ್ರಮದೊಂದಿಗೆ ಏಕರೂಪದ ಶಿಕ್ಷಣವನ್ನು ಜಾರಿಗೆ ತರಬೇಕೆಂದು ಕೋರಿ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಶುಕ್ರವಾರ ಸುಪ್ರೀಂಕೋರ್ಟ್ ವಜಾಮಾಡಿದೆ.
ಈ ಬಗ್ಗೆ ನ್ಯಾಯಾಲಯವು ತೀರ್ಮಾನ ಮಾಡಲು ಸಾಧ್ಯವಿಲ್ಲ. ಒಂದು ಮಂಡಳಿಯನ್ನು ಇನ್ನೊಂದಕ್ಕೆ ವಿಲೀನಗೊಳಿಸಲು ಕಾರ್ಯವನ್ನು ನ್ಯಾಯಾಲಯಕ್ಕೆ ನೀವು ಹೇಗೆ ಕೇಳಬಹುದು.ಇದು ನ್ಯಾಯಾಲಯದ ಕಾರ್ಯಾವಲ್ಲ. ನೀವು ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಬಹುದು ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಅರ್ಜಿದಾರ ಅಶ್ವಿನಿ ಉಪಾಧ್ಯಾಯರಿಗೆ ತಿಳಿಸಿದೆ.
ಭಾರತೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ಮತ್ತು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯನ್ನು ವಿಲೀನಗೊಳಿಸುವ ಮೂಲಕ ಒಂದು ರಾಷ್ಟ್ರ ಒಂದು ಶಿಕ್ಷಣ ಮಂಡಳಿ ಸ್ಥಾಪಿಸುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಪಿಐಎಲ್ ಅರ್ಜಿಯಲ್ಲಿ ತಿಳಿಸಲಾಗಿತ್ತು.