ಬೆಂಗಳೂರು, ಜು 18 (DaijiworldNews/PY): ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಹುಲಿವಾನ ಗಂಗಾಧರಯ್ಯ (70) ಅವರು ನಿನ್ನೆ ರಾತ್ರಿ ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.
ಹುಲಿವಾನ್ ಗಂಗಾಧರಯ್ಯ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ರಾತ್ರಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇವರು ಸುಮಾರು 118ಕ್ಕೂ ಅಧಿಕ ಸಿನೆಮಾಗಳಲ್ಲಿ ಹಾಗೂ 1500ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದರು. ಹುಲಿವಾನ ಗಂಗಾಧರಯ್ಯ ಅವರು ಇತ್ತೀಚಿನವರೆಗೂ ಧಾರವಾಹಿಗಳಲ್ಲಿ ನಟಿಸಿದ್ದರು.
ಹುಲಿವಾನ ಗಂಗಾಧರಯ್ಯ ಅವರು, ಕುರಿಗಳು ಸಾರ್ ಕುರಿಗಳು, ಕರ್ವ, ಕ್ವಾಟ್ಲೆ ಸತೀಶ, ಶಬ್ದವೇದಿ, ನೀರ್ ದೋಸೆ ಸೇರಿದಂತೆ ಹಲವಾರು ಸಿನೆಮಾಗಳಲ್ಲಿ ನಟಿಸಿದ್ದರು.