ಬೆಂಗಳೂರು, ಜು 18 (DaijiworldNews/PY): ಕೇಂದ್ರ ಸಿಬ್ಬಂದಿ, ತರಬೇತಿ ಇಲಾಖೆ ತನ್ನ ನೌಕರರು ಹಾಗೂ ಸಂದರ್ಶಕರಿಗೆ ಆರೋಗ್ಯ ಸೇತು ಆಪ್ ಅನ್ನು ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸಿಜೆ ಎ.ಎಸ್.ಓಕ್ ಹಾಗೂ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠವು ಆರೋಗ್ಯ ಸೇತು ಆಪ್ ಕಡ್ಡಾಯ ಮಾಡಲಾಗಿದೆ ಎಂದು ಆಕ್ಷೇಪ ಮಾಡಿದ್ದ ಬೆಂಗಳೂರಿನ ನಿವಾಸಿ ಅನಿವರ್ ಎ. ಅರವಿಂದ್ ಸಲ್ಲಿಸಿರುವ ಸಾರ್ವಾಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ವಿಚಾರಣೆ ಮಾಡಿದೆ.
ದೆಹಲಿ, ಕೇರಳ ಸೇರಿದಂತೆ ದೇಶದ ಹಲವಾರು ಹೈಕೋರ್ಟ್ಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿ ಅರ್ಜಿ ದಾಖಲಾಗಿದ್ದು, ದಾಖಲಾದ ಅರ್ಜಿಗು ಯಾವ ಹಂತದಲ್ಲಿವೆ ಎನ್ನುವ ಮಾಹಿತಿ ಪಡೆದುಕೊಂಡು ಬಳಿಕ ಈ ಬಗ್ಗೆ ಕರ್ನಾಟಕದಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಹಾಗೂ ಆರೋಗ್ಯ ಸೇತು ಆಪ್ ಬಳಕೆಯನ್ನು ಕಡ್ಡಾಯ ಮಾಡಲಾಗಿದೆ ಎಂದು ಅರ್ಜಿ ಸಲ್ಲಿಸಿದ್ದ ಅರ್ಜಿದಾರರ ಆಕ್ಷೇಪಣೆಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪರ ವಕೀಲರು ಮೂರು ವಾರಗಳ ಕಾಲಾವಕಾಶ ಕೇಳಿದರು.
ಕೇಂದ್ರ ಸರ್ಕಾರದ ಪರ ವಕೀಲರ ಮನವಿಯನ್ನು ಪೀಠ ಪರಿಗಣಿಸಿದ್ದು, ಈ ವಿಷಯದ ಬಗ್ಗೆ ಮುಂದಿನ ವಿಚಾರಣೆ ಸಂದರ್ಭ ಸ್ಪಷ್ಟನೆ ನೀಡಬೇಕು ಎಂದು ಸೂಚನೆ ನೀಡಿದ್ದು, ಆ. 14ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
ಇನ್ನು ಆರೋಗ್ಯ ಸೇತು ಆಪ್ ಅಳವಡಿಕೆಯು ಮೆಟ್ರೋ ರೈಲು ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಕಡ್ಯಾಗೊಳಿಸಿ ಬಿಎಂಆರ್ಸಿಎಲ್ ಅಧಿಸೂಚನೆ ಹೊರಡಿಸಿದ್ದು, ಈ ವಿಚಾರವಾಗಿ ಸ್ಪಷ್ಟನೆ ನೀಡುವಂತೆ ಬಿಎಂಆರ್ಸಿಎಲ್ಗೆ ನ್ಯಾಯಪೀಠವು ನೋಟಿಸ್ ಜಾರಿ ಮಾಡಿದೆ.