ನವದೆಹಲಿ, ಜು.18 (DaijiworldNews/MB) : ''ಬ್ಯಾಂಕ್ಗಳಲ್ಲಿನ ವಸೂಲಾಗದ ಸಾಲವೇ (ಎನ್ಪಿಎ) ದೇಶದ ಆರ್ಥಿಕತೆಗೆ ನಿಜವಾದ ಸಮಸ್ಯೆಯಾಗಿದೆ ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ತಿಳಿಸಿದ್ದು ಮುಂದಿನ ಆರು ತಿಂಗಳಲ್ಲಿ ಈ ಸಾಲದ ಗಾತ್ತವು ಭಾರೀ ಪ್ರಮಾಣದಲ್ಲಿ ಬೆಳೆಯಲಿದೆ. ಈ ಬಗ್ಗೆ ಕೂಡಲೇ ಗಮನ ಹರಿಸಬೇಕು'' ಎಂದು ಎಚ್ಚರಿಕೆ ನೀಡಿದ್ದಾರೆ.
''ಸರ್ಕಾರ ಹೇಳುವಂತೆ ಜನಧನ ಯೋಜನೆ ದೊಡ್ಡದಾದ ಯಶಸ್ಸನ್ನು ಕಂಡಿಲ್ಲ. ಜನರು ಕೊರೊನಾ ಲಾಕ್ಡೌನ್ನಿಂದಾಗಿ ಆರ್ಥಿಕವಾಗಿ ಬಹಳಷ್ಟು ಸಂಕಷ್ಟದಲ್ಲಿ ಇದ್ದಾರೆ. ಸಾಲಭಾದೆಯಿಂದಲ್ಲೂ ಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ಕೃಷಿ ವಲಯದಲ್ಲಿ ಕೊಂಚ ಆಶಾದಾಯಕವಾದ ಬೆಳವಣಿಗೆಯಾಗಿದೆ ಇದು ದೇಶದ ಆರ್ಥಿಕತೆಗೆ ಇರುವ ಒಂದೇ ಒಂದು ಸಕಾರಾತ್ಮಕ ವಿಷಯ'' ಎಂದು ಹೇಳಿದ್ದಾರೆ.
ಈ ಹಿಂದೆ ಲಾಕ್ಡೌನ್ ವಿಸ್ತರಣೆ ಮಾಡಿದ ಸಂದರ್ಭದಲ್ಲಿ, ''ಸ್ವಾತಂತ್ಯ್ರ ದೊರೆತ ಬಳಿಕ ಭಾರತವು ಅತೀ ದೊಡ್ಡದಾದ ತುರ್ತು ಪರಿಸ್ಥಿತಿಯನ್ನು ಈಗ ಎದುರಿಸುತ್ತಿದೆ. ಆದರೂ ನಾವು ಹತಾಶೆಗೆ ಒಳಗಾಗಬೇಕಿಲ್ಲ'' ಎಂದು ಹೇಳಿದ್ದರು.