ಬಳ್ಳಾರಿ, ಜು.18 (DaijiworldNews/MB) : ಲಾಕ್ಡೌನ್ ಅವಧಿಯಲ್ಲಿ ಈಗಾಗಲೇ ಮದುವೆ ನಿಶ್ಚಯವಾಗಿದ್ದವರು ಮಾತ್ರವಲ್ಲದೇ ಮದುವೆ ಆಗಬೇಕೆಂದು ತೀರ್ಮಾನಿಸಿದವರು ಲಾಕ್ಡೌನ್ ಇದ್ದರೂ ಕೂಡಾ ಕಡಿಮೆ ಜನರು ಸೇರಿಕೊಂಡು ವಿವಾಹವಾಗಿದ್ದಾರೆ. ಹೀಗೆ ಲಾಕ್ಡೌನ್ ಸಂದರ್ಭದಲ್ಲಿ ಮಾರ್ಚ್ನಿಂದ ಜೂನ್ ತಿಂಗಳವರೆಗೆ ಕರ್ನಾಟಕದಲ್ಲಿ ಬರೋಬ್ಬರಿ 40 ಸಾವಿರಕ್ಕೂ ಅಧಿಕ ವಿವಾಹಗಳು ನಡೆದಿದೆ. ಇನ್ನು ಈ ಪೈಕಿ 12 ಸಾವಿರದಷ್ಟು ವಿವಾಹಗಳು ಬಳ್ಳಾರಿಯಲ್ಲೇ ನಡೆದಿದೆ ಎಂದು ವರದಿ ತಿಳಿಸಿದೆ.
ಇನ್ನು ಸಾಮಾನ್ಯ ಸಮಯದಲ್ಲಿ ವಿವಾಹದ ಬಗ್ಗೆ ದಾಖಲಾತಿ ಆಗುವುದಿಲ್ಲ. ಆದರೆ ಈ ವರ್ಷ ಲಾಕ್ಡೌನ್ ಕಾರಣದಿಂದ ವಿವಾಹಕ್ಕೂ ಮುನ್ನ ದಾಖಲಾತಿ ಮಾಡಿಸಿಕೊಳ್ಳಲೇಬೇಕಾಗಿದ್ದು ಕರ್ನಾಟಕದಲ್ಲಿ ನಡೆದ ವಿವಾಹದ ಅಂಕಿಅಂಶಗಳು ದೊರೆತಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಅಧಿಕ ವಿವಾಹಗಳು ನಡೆದಿದೆ. ಕಳೆದ ವರ್ಷ ಬಳ್ಳಾರಿಯಲ್ಲಿ 1,141 ವಿವಾಹಗಳು ರಿಜಿಸ್ಟರ್ ಆಗಿದ್ದು ಆದರೆ ಈ ಮೂರು ತಿಂಗಳಲ್ಲೇ 12,300 ವಿವಾಹಗಳು ರಿಜಿಸ್ಟರ್ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಗ್ರಾಮೀಣ ಪ್ರದೇಶದಲ್ಲಿ ಕೆಲವು ವಿಐಪಿಗಳು ಭಾರೀ ವಿಜ್ರಂಭಣೆಯಿಂದ ವಿವಾಹವಾಗಿದ್ದರೆ ಕೆಲವರು ಆನ್ಲೈನ್ ಮೂಲಕವೂ ವಿವಾಹವಾಗಿದ್ದಾರೆ.