ಬೆಂಗಳೂರು, ಜು 18 (DaijiworldNews/PY): ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಜನನ ಹಾಗೂ ಮರಣ ಪ್ರಮಾಣ ಪತ್ರವನ್ನು ನೀಡುವ ಅಧಿಕಾರ ನೀಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ಜನನ ಹಾಗೂ ಮರಣ ಪ್ರಮಾಣ ಪತ್ರವನ್ನು ಗ್ರಾಮ ಪಂಚಾಯತ್, ಪಿಡಿಓಗಳು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರವಾಗಿ ಅರ್ಹರಿಗೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.
ಆದೇಶದಲ್ಲಿ ಉಲ್ಲೇಖಿಸಿರುವ ಸರ್ಕಾರ, ಗ್ರಾಮ ಪಂಚಾಯತ್ ಅಧಿಕಾರಿಗಳು ರಾಷ್ಟ್ರೀಯ ಜನನ ಹಾಗೂ ಮರಣ ಕಾಯ್ದೆ 1969ರ ಪ್ರಕಾರ ವ್ಯಕ್ತಿಗಳ ಜನನ ಹಾಗೂ ಮರಣ ಪ್ರಮಾಣ ಪತ್ರವನ್ನು ಇ ಜನ್ಮ ತಂತ್ರಾಶದಲ್ಲಿ ತಮ್ಮ ಡಿಜಿಟಲ್ ಸಹಿಯ ಮೂಲಕ ಕೊಡಬೇಕು ಎಂದು ತಿಳಿಸಿದೆ.