ನವದೆಹಲಿ, ಜು.18 (DaijiworldNews/MB) : ರಾಜಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದ್ದು ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷ ದೂರವಾಣಿ ಕದ್ದಾಲಿಕೆಯ ಆರೋಪವನ್ನು ಮಾಡಿದ್ದು ಸಿಬಿಐ ತನಿಖೆಗೆ ಆಗ್ರಹಿಸಿದೆ.
ಸರ್ಕಾರದ ವಿರುದ್ಧ ಕದ್ದಾಳಿಕೆಯ ಆರೋಪ ಮಾಡಿರುವ ಬಿಜೆಪಿ ಮುಖಂಡ ಸಂಬಿತ್ ಪಾತ್ರ ಅವರು, ರಾಜಸ್ತಾನ ಸರ್ಕಾರ ಫೋನ್ ಟ್ಯಾಪಿಂಗ್ ಮಾಡಿದೆಯೇ? ಹೌದಾದ್ದಲ್ಲಿ ಸರ್ಕಾರ ಪ್ರಾಮಾಣಿಕವಾದ ಕ್ರಮವನ್ನು ಅನುಸರಿಸಿದೆಯೇ? ಎಂದು ಪ್ರಶ್ನಿಸಿದ್ದು ಈ ಬಗ್ಗೆ ಸಿಬಿಐ ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಹಾಗೆಯೇ ಸರ್ಕಾರ ಆಡಿಯೋವನ್ನು ಕದ್ದಾಲಿಕೆ ಮಾಡಿದೆಯೇ ಎಂದು ಕೂಡಾ ಪ್ರಶ್ನಿಸಿರುವ ಅವರು, ಮುಖ್ಯಮಂತ್ರಿ ಹಾಗೂ ಇತರ ನಾಯಕರು ಈ ಆಡಿಯೋ ನೈಜ್ಯವಾದದ್ದು ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ ಎಫ್ಐಆರ್ನಲ್ಲಿ ಇದನ್ನು ಉದ್ದೇಶವಾಗಿ ಮಾಡಲಾಗಿದೆ ಎಂದು ನಮೂದಿಸಿದೆ. ಸರ್ಕಾರ ಕದ್ದಾಳಿಕೆ ಮಾಡಿದೆಯೇ ಎಂಬುದಕ್ಕೆ ಉತ್ತರಿಸಬೇಕು ಎಂದು ಹೇಳಿದ್ದಾರೆ.