ನವದೆಹಲಿ, ಜು 18 (DaijiworldNews/PY): ವಿಜಯ ಮಲ್ಯ ಅವರು ಸಾಲ ಮರು ಪಾವತಿ ವಿಚಾರವಾಗಿ ದೊಡ್ಡ ಮೊತ್ತದ ಪ್ರಸ್ತಾಪವೆತ್ತಿದ್ದಾರೆ.
ವಿಜಯ ಮಲ್ಯ ಅವರು, ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರ ನೇತೃತ್ವದ ನ್ಯಾಯ ಪೀಠದ ಮುಂದೆ ವಕೀಲರ ಮೂಲಕ ಭಾರೀ ಮೊತ್ತದ ಸಾಲ ಮರುಪಾವತಿಯ ಅಂಶದ ಮನವಿ ಮಾಡಿದ್ದು, ಇದು ಸ್ವೀಕೃತವಾದರೆ, ತಮ್ಮ ವಿರುದ್ದವಾಗಿ ಜಾರಿ ನಿರ್ದೇಶನಾಯ ದಾಖಲು ಮಾಡಿರುವ ಕೇಸುಗಳನ್ನು ಇತ್ಯರ್ಥ ಮಾಡುವಂತೆ ಕೋರಿದ್ದಾರೆ.
ಈ ವಿಚಾರವಾಗಿ ಮಲ್ಯ ಪರ ವಕೀಲರು ಗುರುವಾರ ನಡೆದಿರುವ ವಿಚಾರಣೆಯ ಸಂದರ್ಭ ಮೊತ್ತದ ಅಂಶವನ್ನು ಪ್ರಸ್ತಾಪಿಸಿಲ್ಲ. ಆದರೆ, ವಕೀಲರು ಜೂನ್ ತಿಂಗಳಿನಲ್ಲಿ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಸುಮಾರು 13,960 ಕೋಟಿ ರೂ. ಮೊತ್ತ ನೀಡುವುದಾಗಿ ಉಲ್ಲೇಖಿಸಿದ್ದಾರೆ.
ಮಲ್ಯ ಅವರು ಸುಮಾರು 9 ಸಾವಿರ ಕೋಟಿ ರೂ. ಅನ್ನು ಎಸ್ಬಿಐ ನೇತೃತ್ವದ ಬ್ಯಾಂಕ್ಗಳ ಒಕ್ಕೂಟಕ್ಕೆ ಪಾವತಿಸಬೇಕಾಗಿದೆ ಎನ್ನು ವಿಚಾರವಾಗಿ ಸುದ್ದಿ ಸಂಸ್ಥೆಯೊಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಮಲ್ಯ ಅವರು ಇಂಥಹ ಕೊಡುಗೆಗಳನ್ನು ಆಗಾಗ ನೀಡುತ್ತಿರುತ್ತಾರೆ. ಆದರೆ, ಉದ್ದೇಶಿಸಿರುವ ಮೊತ್ತವನ್ನು ಮೊದಲು ಅವರು ಭಾರತಕ್ಕೆ ವಾಪಾಸ್ಸಾಗುವ ಮುನ್ನ ಠೇವಣಿಯಾಗಿರಿಸಲಿ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.