ಬೆಂಗಳೂರು, ಜು 18 (DaijiworldNews/PY): ವೆಂಟಿಲೇಟರ್ ಖರೀದಿಯಲ್ಲಿ ಬಿಜೆಪಿ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಇಲ್ಲಿ ಜಗಜ್ಜಾಹಿರಾಗಿದೆ. ಕೊರೊನಾ ಸಂಕಷ್ಟ ಸಂದರ್ಭವನ್ನೂ ಬಿಜೆಪಿ ಸರಕಾರ ಲೂಟಿ ಮಾಡಲು ಬಳಸಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರೋಪಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರು ಅವರು, ವೆಂಟಿಲೇಟರ್ ಖರೀದಿಯಲ್ಲಿ ಬಿಜೆಪಿ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಇಲ್ಲಿ ಜಗಜ್ಜಾಹಿರಾಗಿದೆ. ತಮಿಳುನಾಡು ಸರ್ಕಾರ ತಲಾ 4.78 ಲಕ್ಷ ರೂ.ಗೆ ಖರೀದಿಸಿದ ವೆಂಟಿಲೇಟರ್ಗೆ ಕರ್ನಾಟಕ ಸರಕಾರ 18.20 ಲಕ್ಷ ರೂಪಾಯಿ ಕೊಟ್ಟಿದೆ!! ಈ 'ಕೊರೊನಾ ಭ್ರಷ್ಟಾಚಾರ' ದ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಉತ್ತರ ಕೊಡಬೇಕಿದೆ ಎಂದಿದ್ದಾರೆ.
ವೆಂಟಿಲೇಟರ್ ಸಿಗದೆ ಕರ್ನಾಟಕದ ಕೊರೊನಾ ಸೋಂಕಿತರು ಸಾಯುತ್ತಿದ್ದಾರೆ. ಬಿಜೆಪಿ ಮಂತ್ರಿಗಳು ಪಿಪಿಇ ಕಿಟ್ಗಳಿಂದ ಹಿಡಿದು ಬೆಡ್ಗಳವರೆಗೂ ಎಲ್ಲ ಕೊರೊನಾ ಚಿಕಿತ್ಸೆ ಸಲಕರಣೆಗಳ ಖರೀದಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಬಿಜೆಪಿ ಸರಕಾರ ಕೊರೊನಾ ಸಂಕಷ್ಟ ಸಂದರ್ಭವನ್ನೂ ಲೂಟಿ ಮಾಡಲು ಬಳಸಿಕೊಂಡಿದೆ!! ಉತ್ತರಕೊಡಿಬಿಜೆಪಿ ಎಂದು ಹೇಳಿದ್ದಾರೆ.