ನವದೆಹಲಿ, ಜು 18 (DaijiworldNews/PY): ಇತ್ತೀಚೆಗೆ ಉನ್ನತ ಪ್ರೊಫೈಲ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ನಡೆದ ಜಾಗತಿಕ ಹ್ಯಾಕ್ನ ಸಂಪೂರ್ಣ ಮಾಹಿತಿ ನೀಡಲು ಭಾರತದ ಸೈಬರ್ ಸೆಕ್ಯುರಿಟಿ ನೋಡಲ್ ಏಜೆನ್ಸಿ ಸಿಇಆರ್ಟಿಯು ಟ್ವಿಟ್ಟರ್ಗೆ ನೋಟಿಸ್ ಜಾರಿ ಮಾಡಿದೆ.
ಅನಾವಶ್ಯಕ ಟ್ವೀಟ್ಗಳು ಸೇರಿದಂತೆ ಲಿಂಕ್ಗಳಿಗೆ ಭೇಟಿ ನೀಡಿದ ಭಾರತದ ಬಳಕೆದಾರರ ಸಂಖ್ಯೆಯ ಬಗ್ಗೆ ಹಾಗೂ ಬಳಕೆದಾರರಿಗೆ ತಮ್ಮ ಟ್ವಿಟರ್ಗೆ ಅನಧಿಕೃತ ಪ್ರವೇಶದ ಬಗ್ಗೆ ಟ್ವಿಟ್ಟರ್ ಖಾತೆಯಿಂದ ಮಾಹಿತಿ ನೀಡಲಾಗಿದೆಯೇ ಎಂಬ ಮಾಹಿತಿಗಾಗಿ ಸಿಇಆರ್ಟಿ-ಇನ್ ಟ್ವಿಟ್ಟರ್ ಅನ್ನು ಕೇಳಿದೆ ಎಂದು ಮೂಲವು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದೆ.
ಟ್ವಿಟ್ಟರ್ ಖಾತೆಗೆ ಹ್ಯಾಕರ್ಸ್ಗಳು ಉಪಯೋಗಿಸಿಕೊಂಡಿರುವ ಕಾರ್ಯತಂತ್ರ ಹಾಗೂ ಹ್ಯಾಕಿಂಗ್ ಘಟನೆಯ ಪರಿಣಾಮವನ್ನು ತಿಳಿಸುವಂತೆ ಸರ್ಕಾರ ಒತ್ತಾಯಿಸಿದೆ.