ಬೆಂಗಳೂರು, ಜು.19 (DaijiworldNews/MB) : ಸಚಿವರಿಗೆ ಕೊರೊನಾ ಸೋಂಕಿನಿಂದ ಜನರನ್ನು ರಕ್ಷಣೆ ಮಾಡುವತ್ತ ಗಮನವಿಲ್ಲ. ಬದಲಾಗಿ ದುಡ್ಡು ಬಾಚಿಕೊಳ್ಳುವತ್ತವೇ ಗಮನ ಹರಿಸಿದ್ದಾರೆ. ಜನರನ್ನು ಈ ಸೋಂಕಿನಿಂದ ರಕ್ಷಣೆ ಮಾಡಬೇಕಾದವರು ದುಡ್ಡು ದೋಚುವುದರಲ್ಲೇ ಮಗ್ನರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೂರಿದ್ದಾರೆ.
ಈ ಬಗ್ಗೆ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವೆಂಟಿಲೇಟರ್, ಪಿಪಿಇ ಕಿಟ್ ಹೀಗೆ ಎಲ್ಲ ವಸ್ತುಗಳ ಖರೀದಿಗಳಲ್ಲೂ ಭಷ್ಟಚಾರವಾಗಿದೆ ಈ ಹಗರಣಗಳ ಕುರಿತಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಉತ್ತರ ಕೊಡಿ ಎಂದು ಸಿಎಂ ಅವರನ್ನು ಆಗ್ರಹಿಸಿದ್ದಾರೆ.
ಪ್ರಸ್ತುತ ಈ ಹಗರಣದ ಬಗ್ಗೆ ಸುದ್ದಿ ಮಾಡಿರುವ ಮಾಧ್ಯಮಗಳು ಯಾವುದೇ ರಾಜಕೀಯ ಅಜೆಂಡಾವನ್ನು ಹೊಂದಿಲ್ಲ. ರಾಜ್ಯದಲ್ಲಿ ಶೇ 200ರಿಂದ ಶೇ 500ರವರೆಗೆ ಭಷ್ಟಾಚಾರ ಪ್ರಮಾಣವಿದೆ. ಹೀಗಾಗಿ ಮುಖ್ಯಮಂತ್ರಿಯವರು ಉತ್ತರ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಇನ್ನು ಡಿಕೆಶಿಯವರು "ಉತ್ತರ ಕೊಡಿ-ಬಿಜೆಪಿ" ಅಭಿಯಾನವನ್ನು ಆರಂಭಿಸಿದ್ದಾರೆ. ಈ ಮೊದಲು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ''ಲೆಕ್ಕಕೊಡಿ'' ಅಭಿಯಾನ ಆರಂಭಿಸಿದ್ದರು.