ನವದೆಹಲಿ, ಜು.19 (DaijiworldNews/MB) : ರಾಜಸ್ತಾನ ಸರ್ಕಾರ ಫೋನ್ ಸಂಭಾಷಣೆ ಕದ್ದಾಳಿಕೆ ಮಾಡಿದೆ ಎಂಬ ಬಿಜೆಪಿ ಆರೋಪ ಬಗ್ಗೆ ಕೇಂದ್ರ ಗೃಹ ಸಚಿವಾಲಯ ರಾಜಸ್ತಾನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬಳಿ ವರದಿ ಕೇಳಿದೆ.
ಹಾಗೆಯೇ ಕಾಂಗ್ರೆಸ್ ರಾಜಸ್ತಾನದಲ್ಲಿ ಸರ್ಕಾರ ಬೀಳಿಸುವ ಯತ್ನ ನಡೆಯುತ್ತಿರುವ ಬಗ್ಗೆ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿ ಕಾಂಗ್ರೆಸ್ ದಾಖಲಿಸಿರುವ ಎರಡು ಎಫ್ಐಆರ್ ಬಗ್ಗೆ ಕೂಡಾ ವರದಿ ಕೇಳಿದೆ.
ರಾಜಸ್ತಾನ ಕಾಂಗ್ರೆಸ್ ಸರ್ಕಾರದ ಮೇಲೆ ಪೋನ್ ಸಂಭಾಷಣೆ ಕದ್ದಾಳಿಕೆ ಆರೋಪ ಮಾಡಿರುವ ರಾಜಸ್ತಾನ ಬಿಜೆಪಿ, ಸಿಬಿಐ ತನಿಖೆಗೆ ಆಗ್ರಹಿಸಿದೆ.
ಏತನ್ಮಧ್ಯೆ ಬಂಡಾಯವೆದ್ದು ಹರಿಯಾಣದ ರೆಸಾರ್ಟ್ನಲ್ಲಿದ್ದ ರಾಜಸ್ಥಾನದ 18 ಮಂದಿ ಬಂಡಾಯ ಶಾಸಕರು ಏಕಾಏಕಿ ಬೆಂಗಳೂರಿಗೆ ಸ್ಥಳಾಂತರವಾಗಿದ್ದಾರೆ.