ಬೆಂಗಳೂರು, ಜು 19 (DaijiworldNews/PY): ಕೊರೊನಾ ಪರೀಕ್ಷೆ ಮಾಡಿಸಿದವರ ವರದಿ ನೆಗೆಟಿವ್ ಬಂದ ಕೂಡಲೇ ಈ ವರದಿಯನ್ನು ಸಂಬಂಧಪಟ್ಟವರಿಗೆ ಸಂದೇಶದ ಮುಖಾಂತರ ರವಾನಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾನ ಕೊರೊನಾ ಪ್ರಯೋಗಾಲಯಗಳ ನೋಡಲ್ ಅಧಿಕಾರಿಗಳು ಸುತ್ತೋಲೆ ಹೊರಡಿಸಿದೆ.
ಕೊರೊನಾ ನೆಗೆಟಿವ್ ಬಂದ ವ್ಯಕ್ತಿಗಳ ವರದಿ ಬಂದ ಕೂಡಲೇ ಸಂಬಂಧಪಟ್ಟವರಿಗೆ ತಕ್ಷಣ ಕಳುಹಿಸುವ ಈ ಪ್ರಕ್ರಿಯೆಯು ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಎಸ್.ಆರ್.ಎಫ್.ಐ.ಡಿಯಲ್ಲಿ ವ್ಯಕ್ತಿಯ ಹೆಸರು, ಫಲಿತಾಂಶ - ನೆಗೆಟಿವ್ ಎಂದು ಸಂದೇಶದ ಮೂಲಕ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.