ನವದೆಹಲಿ, ಜು 19 (DaijiworldNews/PY): ಅಖಿಲ ಭಾರತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನೈತಿಕ ಕಮಿಟಿಯು, ದೇಶೀಯವಾಗಿ ಅಭಿವೃದ್ದಿ ಪಡಿಸಲಾಗಿರುವ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಅನ್ನು ಮಾನವನ ಮೇಲೆ ಪ್ರಯೋಗ ಮಾಡಲು ಅನುಮೋದನೆ ನೀಡಿದೆ.
ಸೋಮವಾರದಿಂದ ಮನುಷ್ಯನ ಮೇಲಿನ ಕ್ಲಿನಿಕಲ್ ಟ್ರಯಲ್ ಪ್ರಯೋಗಗಳ ಕಾರ್ಯ ಆರಂಭವಾಗುತ್ತದೆ ಎಂದು ಏಮ್ಸ್ ಕಮ್ಯುನಿಟಿ ಮೆಡಿಸಿನ್ ಕೇಂದ್ರದ ಪ್ರೊ.ಡಾ.ಸಂಜಯ್ ರಾಯ್ ತಿಳಿಸಿದ್ದಾರೆ.
ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೊವಾಕ್ಸಿನ್ನ ಮಾನವ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಲು ಏಮ್ಸ್ನ ನೈತಿಕ ಸಮಿತಿಯಿಂದ ನಮಗೆ ಅನುಮೋದನೆ ದೊರೆತಿದೆ. ನಾವು ಸೋಮವಾರದಿಂದ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದೇವೆ. ನಾವು ಇದಕ್ಕಾಗಿ ಆರೋಗ್ಯವಂತ ವ್ಯಕ್ತಿಗಳನ್ನು ಆಯ್ಕೆ ಮಾಡಲಿದ್ದೇವೆ. ಕ್ಲಿನಿಕಲ್ ಟ್ರಯಲ್ ಮಾಡಿ ಅಧ್ಯಯನ ನಡೆಸಲು 18 ರಿಂದ 55 ವಯ್ಯಸ್ಸಿನ ವ್ಯಕ್ತಿಗಳು ಬೇಕಾಗುತ್ತಾರೆ ಎಂದು ತಿಳಿಸಿದರು.
ಡಿಸಿಐಜಿಯು ಇತ್ತೀಚೆಗೆ ಕೊರೊನಾ ಲಸಿಕೆಯ ಕೊವಾಕ್ಸಿನ್ಗೆ ಮಾನವ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮತಿ ನೀಡಿದೆ. ಇದನ್ನು ಐಸಿಎಂಆರ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.
ಪ್ರಯೋಗದಲ್ಲಿ ಭಾಗವಹಿಸಲು ಇಚ್ಛಿಸುವ ಯಾವುದೇ ಆರೋಗ್ಯವಂತ ವ್ಯಕ್ತಿಯು Ctaiims.Covid19@gmail.com ಗೆ ಇಮೇಲ್ ಕಳುಹಿಸಬಹುದು ಅಥವಾ ಎಸ್ಎಂಎಸ್ ಕಳುಹಿಸಬಹುದು ಅಥವಾ 7428847499 ಗೆ ಕರೆ ಮಾಡಬಹುದು ಎಂದು ಹೇಳಿದರು.
ಏಮ್ಸ್ ಮೊದಲ ಮತ್ತು ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ಗಾಗಿ 100 ಮಂದಿಯನ್ನು ಮಾತ್ರ ಆಯ್ಕೆ ಮಾಡಲಿದೆ. ಸೋಮವಾರದಿಂದ ನಮ್ಮ ತಂಡವು ಲಸಿಕೆ ನೀಡುವ ಮೊದಲು ಅವರ ಆರೋಗ್ಯ ತಪಾಸಣೆಯನ್ನು ಪ್ರಾರಂಭಿಸುತ್ತದೆ ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಕಾರ, ಕೋವಾಕ್ಸಿನ್ನ ವಿಚಾರಣೆ ನಡೆಯುತ್ತಿರುವ 12 ಸ್ಥಳಗಳಿವೆ. ಏಮ್ಸ್ ಈಗಾಗಲೇ ಪಾಟ್ನಾ ಮತ್ತು ಇತರ ಕೆಲವು ಸ್ಥಳಗಳಲ್ಲಿ ಪ್ರಯೋಗಗಳಲ್ಲಿ ಪ್ರಾರಂಭಿಸಿವೆ ಎಂದರು.