ನವದೆಹಲಿ, ಜು 19 (DaijiworldNews/PY): ಪಕ್ಷಾಂತರ ಮಾಡಿದ ಎಲ್ಲರನ್ನೂ ಐದು ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯಲ್ಲಿಟ್ಟುಕೊಳ್ಳುವುದನ್ನು ನಿಷೇಧಿಸಲು ಮತ್ತು ಮುಂದಿನ ಚುನಾವಣೆಗೆ ಹೋರಾಡಲು ಪಕ್ಷಾಂತರ ವಿರೋಧಿ ಕಾನೂನಿಗೆ ತಿದ್ದುಪಡಿ ಮಾಡಬೇಕೆಂದು ಭಾನುವಾರ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚುನಾಯಿತ ಸರ್ಕಾರಗಳನ್ನು ಉರುಳಿಸಲು ಭ್ರಷ್ಟ ವಿಧಾನದ ವೈರಸ್ ದೆಹಲಿಯಲ್ಲಿದೆ. ಇದು ವುಹಾನ್ನ ವೈರಸ್ ನಂತೆ ಅಪಾಯಕಾರಿಯಾಗಿದೆ. ಸಂವಿಧಾನದ ಹತ್ತನೇ ವಿಧಿಗೆ ತಿದ್ದುಪಡಿ ಮಾಡುವುದೇ ಇದರ ಪ್ರತಿಕಾಯವಾಗಿದೆ ಎಂದಿದ್ದಾರೆ.
ಕುದುರೆ ವ್ಯಾಪಾರದಲ್ಲಿ ತೊಡಗುವ ಮೂಲಕ ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ತಾನು ಬಿಜೆಪಿಗೆ ಸೇರುತ್ತಿಲ್ಲ ಎಂಬ ಆರೋಪದ ಮೇಲೆ ಪೈಲಟ್ ಹೇಳಿಕೆಯಲ್ಲಿ ಉಲ್ಲೇಖ ಮಾಡಿದ ಸಿಬಲ್ ಅವರು ಗುರುವಾರ ತಮ್ಮ ಘರ್ ವಾಪಾಸಿ ವಿಚಾರ ಏನಾಗಿದೆ. ಸಚಿನ್ ಬೆಂಬಲಿಕ ಶಾಸಕರು ಹರಿಯಾಣದಲ್ಲಿನ ಕೇಸರಿ ಪಕ್ಷದ ಕಣ್ಗಾವಲಿನಲ್ಲಿ ರಜೆಯ ಅವಧಿಯನ್ನು ಕಳೆಯುತ್ತಿದ್ದಾರಾ? ಎಂದು ಕೇಳಿದ್ದರು.