ಗುವಾಹತಿ, ಜು.19 (DaijiworldNews/MB) : ಅಸ್ಸಾಂನಲ್ಲಿ ಭೀಕರ ಪ್ರವಾಹ ಉಂಟಾಗಿ ಮೂವತ್ತು ಜಿಲ್ಲೆಗಳು ಜಲಾವೃತವಾಗಿದ್ದು ಈವರೆಗೆ 76 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ 96 ಕಾಡು ಪ್ರಾಣಿಗಳೂ ಕೂಡಾ ಮೃತಪಟ್ಟಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಈ ಭಾರೀ ಪ್ರವಾಹದಿಂದಾಗಿ 53,99,017 ಸಂಕಷ್ಟದಲ್ಲಿ ಸಿಲುಕಿದ್ದು ಕಳೆದ 24 ಗಂಟೆಗಳಲ್ಲಿ ಜಿಲ್ಲಾಡಳಿತದೊಂದಿಗೆ ರಾಜ್ಯ ವಿಪತ್ತು ದಳದ ಸಿಬ್ಬಂದಿಗಳು ಸೇರಿ 2,389 ಜನರನ್ನು ರಕ್ಷಣೆ ಮಾಡಲಾಗಿದೆ. ಸುಮಾರು 3,014 ಗ್ರಾಮಗಳು ನೀರಿನಿಂದ ಮುಳುಗಿದ್ದು 1,27,955,33 ಹೆಕ್ಟೇರ್ ಕೃಷಿ ಭೂಮಿಯಲ್ಲೂ ಕೂಡಾ ಸಂಪೂರ್ಣವಾಗಿ ಮುಳುಗಿದೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಜಲಾವೃತವಾಗಿದ್ದು ಇಲ್ಲಿ 76 ಪ್ರಾಣಿಗಳು ಸಾವನ್ನಪ್ಪಿದ್ದು 170 ಪ್ರಾಣಿಗಳನ್ನು ರಕ್ಷಿಸಲಾಗಿದೆ. ಉಳಿದ ಹಲವು ಉದ್ಯಾನಗಳಲ್ಲಿ ಪ್ರಾಣಿಗಳು ಸಾವನ್ನಪ್ಪಿದ್ದು 9 ರೈನೋಗಳು, 4 ಕಾಡುಕೋಣಗಳು, 7 ಕಾಡು ಹಂದಿಗಳು, 2 ಜಿಂಕೆಗಳು, 82 ಕೃಷ್ಣಮೃಗಗಳು ಈವರೆಗೆ ಅಸುನೀಗಿದೆ.
ಒಟ್ಟು 487 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಇಲ್ಲಿ 1.25 ಲಕ್ಷ ಜನರು ಆಶ್ರಯ ಪಡೆದಿದ್ದಾರೆ.