ಬೆಂಗಳೂರು, ಜು.20 (DaijiworldNews/MB) : ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಿಟ್ಟಿನಲ್ಲಿ ಕೊರೊನಾ ಪರೀಕ್ಷೆಯನ್ನು ಹೆಚ್ಚಿಸಲು ಮತ್ತೆ ಹೊಸದಾಗಿ 20 ಲ್ಯಾಬ್ ತೆರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ತಿಳಿಸಿದ್ದಾರೆ.
ಪ್ರಸ್ತುತ 85 ಲ್ಯಾಬ್ಗಳಿದ್ದು ದಿನಕ್ಕೆ 35 ಸಾವಿರ ಪರೀಕ್ಷೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲೇ ವಾರ್ಡ್ ಬೂತ್ ಮಟ್ಟದಲ್ಲಿ ಸಿಬ್ಬಂದಿ ಮನೆ ಮನೆಗೆ ತೆರಳಿ ಪರೀಕ್ಷೆ ನಡೆಸುತ್ತಿದ್ದು ಇದರಿಂದಾಗಿ ಸೋಂಕು ಪತ್ತೆ ಸುಲಭವಾಗುತ್ತದೆ ಎಂದು ಹೇಳಿದರು.
ಹಾಗೆಯೇ ಈ ಸಂದರ್ಭದಲ್ಲೇ ಕೊರೊನಾ ಸಮುದಾಯ ಹಂತಕ್ಕೆ ಹರಡಿದೆ ಎಂಬುದನ್ನು ಅಲ್ಲಗಳೆದರು.
ಶೇ. 95 ರಷ್ಟು ರೋಗಿಗಳಿಗೆ ಲಕ್ಷಣ ಇಲ್ಲದವರಾಗಿದ್ದು ರೋಗ ಲಕ್ಷಣ ಇದ್ದವರು ಮನೆಯಲ್ಲೇ ಪ್ರತ್ಯೇಕವಾಗಿ ಇರಲು ಪ್ರೋತ್ಸಾಹಿಸಬೇಕಾಗಿದೆ ಎಂದರು.