ಬೆಂಗಳೂರು, ಜು 20 (Daijiworld News/MSP): ರಾಜ್ಯದಲ್ಲಿ ಏರಿಕೆಯಾದ ಹೊಸ ಪ್ರಕರಣಗಳಿಂದ ಚೇತರಿಕೆ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, " ಕಳೆದ ಒಂದು ವಾರದಲ್ಲಿ ವರದಿಯಾದ ಹೊಸ ಪ್ರಕರಣಗಳಿಂದ ರಾಜ್ಯದ ಚೇತರಿಕೆ ಪ್ರಮಾಣ ಸ್ವಲ್ಪ ಇಳಿಕೆ ಕಂಡಿದೆ. ಇತ್ತೀಚೆಗೆ ವರದಿಯಾದ ಸುಮಾರು 23,000 ಪ್ರಕರಣಗಳಲ್ಲಿ ಶೇಕಡಾ 77.4 ರಷ್ಟು ಸೋಂಕಿತರಲ್ಲಿ ರೋಗಲಕ್ಷಣ ಇಲ್ಲ. ಮುಂದಿನ 7-10 ದಿನಗಳಲ್ಲಿ ಇವರು ಗುಣಮುಖರಾಗುತ್ತಿದ್ದಂತೆ ಸಕ್ರಿಯ ಪ್ರಕರಣಗಳಿಗಿಂತ ಚೇತರಿಕೆ ಹೊಂದಿದವರ ಸಂಖ್ಯೆ ಹೆಚ್ಚಾಗುತ್ತದೆ" ಎಂದು ಹೇಳಿದ್ದಾರೆ
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 40 ಸಾವಿರದ ಗಡಿಯತ್ತ ಸಾಗಿದೆ. ಮಹಾರಾಷ್ಟ್ರ ತಮಿಳುನಾಡಿನ ಅನಂತರ ದೇಶದ ಮೂರನೇ ಅತೀ ಹೆಚ್ಚು ಸಕ್ರಿಯ ಪ್ರಕರಣ ರಾಜ್ಯದಾಗಿದೆ. ಭಾನುವಾರ ರಾಜ್ಯದಲ್ಲಿ ಒಟ್ಟು 4,120 ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿತ್ತು. ಇದುವರೆಗೆ 23,065 ಮಂದಿ ಗುಣಮುಖರಾಗಿದ್ದಾರೆ. ಮೃತರ ಸಂಖ್ಯೆ 1, 331 ಕ್ಕೆ ಏರಿಕೆಯಾಗಿದೆ.