ತಿರುಪತಿ, ಜು 20 (Daijiworld News/MSP): ತಿರುಪತಿಯಲ್ಲಿ ಇಳಿಯಬೇಕಿದ್ದ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್ ಮಾಡಿ ಪೈಲಟ್ ತನ್ನ ಸಮಯಪ್ರಜ್ಞೆ ಮೆರೆದ ಕಾರಣ 75 ಮಂದಿ ಪ್ರಯಾಣಿಕರ ಜೀವ ಉಳಿಸಿರುವ ಘಟನೆ ಭಾನುವಾರ ನಡೆದಿದೆ.
ಹೈದರಾಬಾದ್-ತಿರುಪತಿ-ಬೆಂಗಳೂರು ಮಧ್ಯೆ ಸಂಚರಿಸಲಿರುವ ಇಂಡಿಗೋ ಸಂಸ್ಥೆಗೆ ವಿಮಾನ ತಿರುಪತಿಯಲ್ಲಿ ಇಳಿಯಬೇಕಾಗಿತ್ತು. ಒಂದು ವೇಳೆ ಅಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದರೆ ದೊಡ್ಡ ಅನಾಹುತವೇ ನಡೆದುಹೋಗುತ್ತಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಪೈಲೆಟ್ ಸಮಯಪ್ರಜ್ಞೆ ಮರೆದು ವಿಮಾನವನ್ನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾರೆ.
ವಿಮಾನದಲ್ಲಿ 75 ಪ್ರಯಾಣಿಕರ ಪೈಕಿ 41 ಪ್ರಯಾಣಿಕರನ್ನು ಇಳಿಸಲೆಂದು ವಿಮಾನ ತಿರುಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿತ್ತು. ಇನ್ನೇನು ರನ್ವೇ ವಿಮಾನ ಇಳಿಯುತ್ತಿರುವಾಗಲೇ , ರನ್ ವೇ ಯಲ್ಲಿ ಅಪಘಾತಕ್ಕೀಡಾಗಿದ್ದ ಅಗ್ನಿಶಾಮಕದಳದ ವಾಹನ ನಿಂತಿತ್ತು. ಕೂದಳೆಲೆಯ ಅಂತರದಲ್ಲಿ ಸಮಯಪ್ರಜ್ಞೆ ತೋರಿದ ಪೈಲಟ್ ವಿಮಾನವನ್ನು ಇಳಿಸುವ ತಕ್ಷಣ ಟೇಕ್ಆಫ್ ಮಾಡಿ ಬೆಂಗಳೂರಿನ ಕಡೆಗೆ ಪ್ರಯಾಣಿಸಿದ್ದಾರೆ. ಹೀಗಾಗಿ ಮುಂದೊದಗಬಹುದಾದ ದುಡ್ಡ ಅನಾಹುತವನ್ನೆ ತಪ್ಪಿಸಿದ್ದಾರೆ. ಆದರೆ ಇದರಿಂದಾಗಿ ವಿಮಾನ ಹಾರಾಟದಲ್ಲಿ ಮೂರು ಗಂಟೆ ವ್ಯತ್ಯಯವಾಗಿದೆ.