ನವದೆಹಲಿ, ಜು. 21 (DaijiworldNews/MB) : ಕಳೆದ ತಿಂಗಳು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಮಧ್ಯಪ್ರದೇಶದ ಗವರ್ನರ್ ಲಾಲ್ ಜಿ ಟಂಡನ್ ಅವರು ಮಂಗಳವಾರ ನಿಧನರಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಅವರ ಪುತ್ರ ಅಶುತೋಷ್ ಟಂಡನ್ ತಿಳಿಸಿದ್ದಾರೆ.
ನನ್ನ ತಂದೆ, ಮಧ್ಯಪ್ರದೇಶದ ಗವರ್ನರ್ ಲಾಲ್ ಜಿ ಟಂಡನ್ ಅವರು ಇಂದು ಬೆಳಿಗ್ಗೆ 5:35 ಕ್ಕೆ ಅಸುನೀಗಿದ್ದಾರೆ. ಅಂತಿಮ ಕ್ರಿಯೆಯು ಸಂಜೆ 4 ಗಂಟೆಗೆ ನಡೆಯಲಿದ್ದು ತಾವೆಲ್ಲರೂ ಕೊರೊನಾ ಕಾರಣದಿಂದ ಮನೆಯಲ್ಲೇ ಇದ್ದು ಶ್ರದ್ಧಾಂಜಲಿ ಅರ್ಪಿಸಿ ಎಂದು ಅಶುತೋಷ್ ಟಂಡನ್ ಹೇಳಿದ್ದಾರೆ.
85 ವರ್ಷದ ಲಾಲ್ ಜಿ ಟಂಡನ್ ಅವರನ್ನು ಜೂನ್ 14 ರಂದು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರ ವಿಸರ್ಜನೆಯ ಸಮಸ್ಯೆಯಿಂದಾಗಿ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 21 ರ ಮಂಗಳವಾರ ನಿಧನರಾಗಿದ್ದಾರೆ.