ನವದೆಹಲಿ, ಜು 21 (DaijiworldNews/PY): ಜು 27ರಂದು ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನ ಆಗಮಿಸಲಿದ್ದು, ಬಳಿಕ ಜುಲೈ 29ರಂದು ಭಾರತೀಯ ವಾಯು ಪಡೆಗೆ ಸೇರ್ಪಡೆಯಾಗಲಿವೆ.
ರಫೇನ್ ಯುದ್ದ ವಿಮಾನಗಳು ಫ್ರಾನ್ಸ್ನ ಇಸ್ಟ್ರೇಸ್ನಿಂದ ಟೇಕ್ ಆಫ್ ಆಗಲಿದೆ. ಭಾರತಕ್ಕೆ ಫ್ರಾನ್ಸ್ನ ಟ್ಯಾಂಕರ್ ವಾಹಕದ ಮೂಲಕ ಆಗಮಿಸಲಿದ್ದು, ಫ್ರಾನ್ಸ್ ನಿರ್ಮಿತ ಐದು ರಫೇಲ್ ವಿಮಾನಗಳ ಜು 27ರಂದು ಭಾರತಕ್ಕೆ ಆಗಮಿಸಲಿವೆ. ಈ ಯುದ್ದ ವಿಮಾನಗಳು ಜು 27ರಂದು ಹರಿಯಾಣದ ಅಂಬಾಲಾ ಏರ್ ಬೇಸ್ನಲ್ಲಿ ಲ್ಯಾಂಡ್ ಆಗಲಿದ್ದು, ಜು 29ರಂದು ಭಾರತೀಯ ಸೇನಾ ಪಡೆಗೆ ಸೇರ್ಪಡೆಯಾಗಲಿವೆ. ಈ ನಡುವೆ ಹವಾಮಾನ ಸ್ಥಿತಿಯು ಸರಿಯಾಗಿದ್ದರೆ ಹರಿಯಾಣದ ಅಂಬಾಲಾ ವಾಯು ನೆಲೆಯಲ್ಲಿ ಜು 29ರಂದೇ ರಫೆಲ್ ವಿಮಾನಗಳ ಹಾರಾಟ ಪರೀಕ್ಷೆಯೂ ಕೂಡಾ ಆಗಲಿವೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.
ರಫೇಲ್ ಯುದ್ದ ವಿಮಾನದ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಯ ಉಪಯೋಗದ ವಿಚಾರವಾಗಿ ಐಎಎಫ್ನ ವಾಯು ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿಗಳಿಗೆ ಮಾಹಿತಿ ಕೊಡಲಾಗುತ್ತಿದ್ದು, ಅವರಿಗೆ ತರಬೇತಿಯನ್ನು ಕೂಡಾ ನೀಡಲಾಗುತ್ತದೆ ಎಂದು ವಿಂಗ್ ಕಮಾಂಡರ್ ಇಂದ್ರಾಣಿ ನಂದಿ ಹೇಳಿದ್ದಾರೆ.
ಭಾರತ ಹಾಗೂ ಫಾನ್ಸ್ 36 ರಫೇನ್ ಯುದ್ದ ವಿಮಾನಗಳನ್ನು ಖರೀದಿ ಮಾಡುವ ಒಪ್ಪಂದವನ್ನು ಮಾಡಿಕೊಂಡಿದ್ದು, ಐದು ವಿಮಾನಗಳು ಮಾತ್ರ ಈ ಒಪ್ಪಂದ ಮೊದಲ ಹಂತದಲ್ಲಿ ವಾಯುಪಡೆಯನ್ನು ಸೇರ್ಪಡೆಯಾಗಲಿವೆ.