ಬೆಂಗಳೂರು, ಜು 21 (DaijiworldNews/PY): ಜೂನ್ 1 ರವರೆಗೆ ಮೂರು ತಿಂಗಳ ಕಾಲ ಬೆಂಗಳೂರು ಮೂಲದ ನಿಮ್ಹಾನ್ಸ್ ಅಧ್ಯಯನದಲ್ಲಿ ಕರ್ನಾಟಕದಲ್ಲಿ SARS-CoV-2ನ ಆರು ವಿಭಿನ್ನ ಪ್ರಭೇದಗಳು ಪತ್ತೆಯಾಗಿವೆ.
ಈ ಬಗ್ಗೆ ಮಾಹಿತಿ ನೀಡಿದ ಸಂಶೋಧಕರು, ಈ ವೈರಾಣಿವಿಗೆ ಸಂಬಂಧಪಟ್ಟಂತೆ ಇನ್ನೂ ಕೂಡಾ ಹಲವಾರು ಸ್ಟ್ರೈನ್ಗಳಿರುವ ಸಾಧ್ಯತೆಗಳಿವೆ. ಅಲ್ಲದೇ ಇದು ಚಿಕಿತ್ಸೆಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ.
ಇದು ನಿಮ್ಹ್ಯಾನ್ಸ್ನ ನ್ಯೂರೋವೈರಾಲಜಿ ವಿಭಾಗದಲ್ಲಿ ವೈರಸ್ನ ಅನುಕ್ರಮವನ್ನು ಆಧರಿಸಿದ್ದು, ಅಲ್ಲಿ ಎಂಟು ಜಿಲ್ಲೆಗಳ ರೋಗಿಗಳಿಂದ ಸಂಗ್ರಹಿಸಲ್ಪಟ್ಟ ಮಾದರಿಯಿಂದ ತೆಗೆದ ವೈರಸ್ನ ಜೀನೋಮ್ಗಳನ್ನು ಅಧ್ಯಯನ ಮಾಡಲಾಗಿದೆ. ರಾಜ್ಯದಲ್ಲಿ ಕಂಡುಬರುವ ಪ್ರಮುಖ ಪ್ರಭೇದಗಳು ಬಿ 6 ಮತ್ತು ಬಿ 1 ಆಗಿದೆ ಎಂದು ನ್ಯೂರೊವೈರಾಲಜಿ ವಿಭಾಗದ ನಿಮ್ಹಾನ್ಸ್ನ ಮುಖ್ಯಸ್ಥ ಡಾ.ವಿ.ರವಿ ಹೇಳಿದ್ದಾರೆ.
ಈ ಪ್ರಭೇದಗಳನ್ನು SARS-CoV-2ನ ವೈರಸ್ನ 47 ಪೂರ್ಣ ಜೀನೋಮ್ಗಳನ್ನು ಅಧ್ಯಯನ ಮಾಡಲಾಗಿದ್ದು, ಇವುಗಳಲ್ಲಿ, ಬಿ 1 ಯುರೋಪಿನಿಂದ ವರದಿಯಾಗಿದ್ದು ಬಿ 6 ಫಿಲಿಪೈನ್ಸ್, ಬ್ರಿಟನ್, ಉತ್ತರ ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ್ ಮತ್ತು ಭಾರತದಲ್ಲಿ ವರದಿಯಾಗಿದೆ. ಅಲ್ಲದೇ ಬೆಂಗಳೂರು ನಗರ ಮತ್ತು ಗ್ರಾಮೀಣ, ಬೆಳಗಾವಿ, ಬೀದರ್, ಬಿಜಾಪುರ, ಮೈಸೂರು, ದಾವಣಗರೆ ಮತ್ತು ಬಾಗಲಕೋಟೆ ಜಿಲ್ಲೆಗಳಿಂದ ಮಾರ್ಚ್ 5 ರಿಂದ ಜೂನ್ 1 ರವರೆಗೆ ಸಂಗ್ರಹಿಸಿದ ಮಾದರಿಯಿಂದ ನಡೆದ ಅಧ್ಯಯನದ ವರದಿ ಇದು.
ಜೂನ್ ಮೊದಲನೆಯ ನಂತರದ ಮಾದರಿ ಸಂಗ್ರಹ ಇನ್ನೂ ಪ್ರಗತಿಯಲ್ಲಿದ್ದು ಮತ್ತು ಫಲಿತಾಂಗಳಿಗಾಗಿ ನಿರೀಕ್ಷಿಸುತ್ತಿದ್ದೇವೆ ಎಂದು ಡಾ.ರವಿ ತಿಳಿಸಿದ್ದಾರೆ.