ಜೈಪುರ, ಜು 21 (DaijiworldNews/PY): ಹೈಕೋರ್ಟ್ ವಿಭಾಗೀಯ ಪೀಠವು ಸಚಿನ್ ಪೈಲಟ್ ಸೇರಿದಂತೆ ಇತರ 18 ಬಂಡಾಯ ಶಾಸಕರಿಗೆ ರಾಜ್ಯ ಸರ್ಕಾರ ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ತೀರ್ಪನ್ನು ಶುಕ್ರವಾರಕ್ಕೆ ಮುಂದೂಡಿದೆ.
ಅನರ್ಹತೆ ನೋಟಿಸ್ಗಳ ಬಗ್ಗೆ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸಿ.ಪಿ ಜೋಷಿ ಅವರಿಗೆ ತಿಳಿಸಿದೆ.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಂತಿ ಮತ್ತು ನ್ಯಾಯಮೂರ್ತಿ ಪ್ರಕಾಶ್ ಗುಪ್ತಾ ಅವರ ನ್ಯಾಯಪೀಠ ಕೈಗೆತ್ತಿಕೊಂಡಿದ್ದು, ಶುಕ್ರವಾರಕ್ಕೆ ತೀರ್ಪನ್ನು ಮುಂದೂಡಿದೆ.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ಸ್ಪೀಕರ್ ಹಾಗೂ ಅನರ್ಹತೆಯ ನೋಟಿಸ್ಗೆ ಜಾರಿಗೊಳಿಸುವ ಮುನ್ನ ಈ ಬಗ್ಗೆ ಯೋಚಿಸಿಲ್ಲ. ನೋಟಿಸ್ಗೆ ಉತ್ತರ ನೀಡಲು ಸಾಕಷ್ಟು ಸಮಯ ನೀಡು ಅವಶ್ಯಕತೆ ಇತ್ತು ಎಂದು ಹೇಳಿದ್ದಾರೆ.
ಹರೀಶ್ ಸಾಳ್ವೆ ಹಾಗೂ ಮುಕುಲ್ ರೋಹಟಗಿ ಅವರು ಸಚಿನ್ ಪೈಲಟ್ ಅವರ ಪರ ವಾದಿಸಿದ್ದಾರೆ. ಹಾಗೂ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಕಾಂಗ್ರೆಸ್ ಸರ್ಕಾರ ಪರ ವಾದ ಮಂಡನೆ ಮಾಡಿದ್ದಾರೆ.