ನವದೆಹಲಿ, ಜು 22 (Daijiworld News/MSP): ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಭಾರತದ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ತಯಾರಿಸುತ್ತಿರುವ ಈ COVID-19 ಲಸಿಕೆಯ 3 ನೇ ಹಂತದ ಪ್ರಯೋಗಗಳನ್ನು ಪ್ರಾರಂಭಿಸಲು ಅಣಿಗೊಳ್ಳುತ್ತಿದೆ. ಈ ಲಸಿಕೆಗೆ 'ಕೋವಿಶೀಲ್ಡ್' ಎಂದು ಹೆಸರಿಸಲಾಗಿದೆ.
ಆಗಸ್ಟ್ನಲ್ಲಿ ಆರಂಭವಾಗುವ ಮೂರನೇ ಹಂತದ ಪ್ರಯೋಗದಲ್ಲಿ ವೃದ್ಧರು, ಆರೋಗ್ಯ ಕಾರ್ಯಕರ್ತರು ಹಾಗೂ ಆಯ್ದ ಆಸ್ಪತ್ರೆಗಳಲ್ಲಿ ರೋಗಿ ಗೀಗೆ 4,000-5,000 ಮೇಲೆ ಲಸಿಕೆಯ ಪ್ರಯೋಗವಾಗಲಿದೆ. ಎಲ್ಲವೂ ಅಂದುಕೊಂಡತೆ ಆದರೆ ಮುಂದಿನ ವರ್ಷದ ಜೂನ್ ವೇಳೆಗೆ ಲಸಿಕೆ ಬಿಡುಗಡೆ ಮಾಡಲಿದೆ ಎಂದು ಸಂಸ್ಥೆ ಹೇಳಿದೆ.
ಪುಣೆ ಮೂಲದ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಆದರ್ ಪೂನವಾಲ್ಲಾ ಮಾತನಾಡಿ, " ಮೂರನೇ ಹಂತದ ಪ್ರಯೋಗಕ್ಕಾಗಿ ಮುಂದಿನ 48 ಗಂಟೆಗಳಲ್ಲಿ ನಾವು ಈ ಅರ್ಜಿಯನ್ನು ಭಾರತದ ಔಷಧ ನಿಯಂತ್ರಕ ಕಚೇರಿಗೆ ಸಲ್ಲಿಸುತ್ತಿದ್ದೇವೆ. ಅವರು ಸುಮಾರು 1-2 ವಾರಗಳೊಳಗೆ
ನಾವು ಯಾವ ರೀತಿಯ ಅಧ್ಯಯನ ಮತ್ತು ಪ್ರಯೋಗವನ್ನು ಮಾಡಬೇಕಾಗಬಹುದು ಎಂಬುದರ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಜನಬಳಕೆಗೆ ದೊರೆಯುವ ಮುಂಚೆ , ಆಕ್ಸ್ಫರ್ಡ್ ತಂತ್ರಜ್ಞಾನದಿಂದ ಎರವಲು ಪಡೆದ ಲಸಿಕೆಯೂ ಉತ್ಪಾದನೆಯಾದ ಬಳಿಕ ಕಂಪನಿಯಲ್ಲಿ ಪ್ರಯೋಗ ಮಾಡಲಾಗುತ್ತದೆ . ನಂತರವಷ್ಟೇ ಇದನ್ನು ಸಿಡಿಐ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ಬಳಿಕ ಆ ಬ್ಯಾಚ್ನ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ದೊರೆಯುವಂತೆ ಮಾಡಲಾಗುತ್ತದೆ. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ಲಸಿಕೆ ತಯಾರಾಗಲು ಮಾರ್ಚ್ ತಿಂಗಳಾಗಬಹುದು. ಜೂನ್ ವೇಳೆ ಬಹುತೇಕ ಎಲ್ಲರಿಗೂ ಇದು ಲಭ್ಯವಾಗಬಹುದು ಎಂದು ಹೇಳಿದ್ದಾರೆ.
ಲಸಿಕೆ ಪ್ರಾರಂಭಿಸಲು ಅಂತಿಮ ಅನುಮೋದನೆಗೆ ಮುಂಚಿತವಾಗಿ 300 ಮಿಲಿಯನ್ ಡೋಸ್ ತಯಾರಿಸಲು ಸೀರಮ್ million 200 ಮಿಲಿಯನ್ ಹೂಡಿಕೆ ಮಾಡುತ್ತಿದೆ.