ಚಾಮರಾಜನಗರ, ಜು. 22 (DaijiworldNews/MB) : ಕ್ವಾರಂಟೈನ್ ನಿಯಮ ಉಲ್ಲಂಘಿಸಬಾರದು ಎಂದು ಚಾಮರಾಜನಗರದ ಕೇರಳ ಕರ್ನಾಟಕ ಗಡಿ ಮೂಲೆಹೊಳೆ ಚೆಕ್ಪೋಸ್ಟ್ನ ರಸ್ತೆಯಲ್ಲೇ ಕೇರಳ ಮೂಲದ ಯುವಕ ಹಾಗೂ ಶಿವಮೊಗ್ಗ ಜಿಲ್ಲೆಯ ಯುವತಿ ವಿವಾಹವಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಅಂತರ್ ರಾಜ್ಯ ಪ್ರಯಾಣ ಮಾಡಿದರೆ ಕ್ವಾರಂಟೈನ್ ಆಗಬೇಕಾಗುತ್ತದೆ. ಹಾಗೆಯೇ ಕೊರೊನಾ ನಿಯಮವನ್ನು ಉಲ್ಲಂಘಿಸಬಾರದು ಎಂಬ ಕಾರಣಕ್ಕೆ ಈ ಯುವ ಜೋಡಿ ರಸ್ತೆಯಲ್ಲಿಯೇ ವಿವಾಹವಾಗುವ ನಿರ್ಧಾರ ಕೈಗೊಂಡಿದ್ದಾರೆ.
ಇಬ್ಬರಿಗೂ ಕಳೆದು ತಿಂಗಳು ನಿಶ್ಚಿತಾರ್ಥವಾಗಿದ್ದು ಈಗ ಮನೆಯವರ ಒಪ್ಪಿಗೆ ಪಡೆದು ರಸ್ತೆಯಲ್ಲಿ ವಿವಾಹವಾಗಿದ್ದಾರೆ. ಈ ಹಿಂದೆ ತಮಿಳುನಾಡು ಕೇರಳ ಗಡಿಯಲ್ಲಿಯೂ ಕೂಡಾ ಜೋಡಿಗಳು ಕೊರೊನಾ ನಿಯಮ ಉಲ್ಲಂಘಿಸದಂತೆ ಪ್ಲ್ಯಾನ್ ಮಾಡಿ ಗಡಿಯಲ್ಲೇ ವಿವಾಹವಾಗಿದ್ದರು.