ಬೆಂಗಳೂರು, ಜು. 22 (DaijiworldNews/SM): ಸಿದ್ದಿ ಸಮುದಾಯದ ಮೊದಲ ಪದವಿಧರರಾದ ಶಾಂತಾರಾಮ್ ಸಿದ್ದಿ ಅವರಿಗೆ ಬಿಜೆಪಿ ಪ್ರಮುಖ ಸ್ಥಾನ ನೀಡಿದ್ದು, ವಿಧಾನ ಪರಿಷತ್ ನ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಗೊಳಿಸಿದೆ.
ಆ ಮೂಲಕ ಸಿದ್ಧಿ ಸಮುದಾಯದ ಅಭಿವೃದ್ದಿಗೆ ನಾಯಕರೊಬ್ಬರನ್ನು ಬಿಜೆಪಿ ಆಯ್ಕೆ ಮಾಡಿಕೊಂಡಿದೆ. ಕರ್ನಾಟಕದ ಸಿದ್ಧಿ ಜನಾಂಗದ ಮೊದಲ ಪದವಿಧರರರಾಗಿರುವ ಶಾಂತಾರಾಮ್ ಸಿದ್ದಿ ತಮ್ಮ ಸಮುದಾಯದ ಏಳಿಗೆಗಾಗಿ ಸೇವೆ ಸಲ್ಲಿಸಿದ್ದರು. ವನವಾಸಿಗಳಿಗೆ ಮೂಲ ಸೌಕರ್ಯ, ಶಿಕ್ಷಣ ಸೇರಿದಂತೆ ವಿವಿಧ ಸೌಕರ್ಯಗಳನ್ನು ಪಡೆಯುವ ಸಲುವಾಗಿ ಶ್ರಮಿಸಿದವರಾಗಿದ್ದಾರೆ.
ಸಮುದಾಯದ ಏಳಿಗೆಗೋಸ್ಕರ ನಿರಂತರ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ನ ನಾಮ ನಿರ್ದೇಶಿತ ಸ್ಥಾನಕ್ಕೆ ಶಾಂತಾರಾಮ್ ಸಿದ್ದಿಯವರನ್ನು ಬಿಜೆಪಿ ಆಯ್ಕೆ ಮಾಡಿಕೊಂಡಿದೆ.