ನವದೆಹಲಿ, ಜು 23 (Daijiworld News/MSP): ಸ್ವದೇಶಿ ನಿರ್ಮಿತ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಪ್ಯಾಥೊಕ್ಯಾಚ್ ಕಿಟ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬುಧವಾರ ಅನುಮತಿ ನೀಡಿದೆ.
ಪುಣೆ ಮೂಲದ ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ 'ಪ್ಯಾಥೊಕ್ಯಾಚ್' ಕೋವಿಡ್-19 ಆಯಂಟಿಜೆನ್ ರ್ಯಾಪಿಡ್ ಪರೀಕ್ಷಾ ಕಿಟ್ ನ್ನು ತಯಾರಿಸಿದ್ದು ಇದಕ್ಕೆ ಬುಧವಾರ ,ಐಸಿಎಂಆರ್ ಅನುಮೋದನೆ ನೀಡಿದೆ.’ ಈ ಕಿಟ್ ಸಂಪೂರ್ಣವಾಗಿ ಭಾರತದಲ್ಲೇ ಸಿದ್ದಗೊಳಿಸಲಾಗಿದೆ
ಈ ಕಿಟ್ ಮೂಲಕ ಕೇವಲ 30 ನಿಮಿಷದಲ್ಲಿ ಫಲಿತಾಂಶ ಪಡೆಯಬಹುದಾಗಿದ್ದು ಈ ಕಿಟ್ ನ ಬೆಲೆಯನ್ನು ₹450ಗೆ ನಿಗದಿ ಪಡಿಸಲಾಗಿದೆ. ಸುಸಜ್ಜಿತ ಪ್ರಯೋಗಾಲಯದ ವ್ಯವಸ್ಥೆ ಇಲ್ಲದೆಯೇ ರ್ಯಾಪಿಡ್ ಪರೀಕ್ಷೆ ನಡೆಸಬಹುದು.
ಭಾರತದಲ್ಲಿ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲೂ ಮೈಲ್ಯಾಬ್ ಪೂರ್ಣಪ್ರಮಾಣದಲ್ಲಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅತ್ಯಂತ ಕಡಿಮೆ ದರದಲ್ಲಿ ಪರೀಕ್ಷೆಗೆ ಅಯಂಟಿಜೆನ್ ಕಿಟ್ಗೆ ತಯಾರಿಸಲಾಗಿದೆ ಎಂದು ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕ ಹಸ್ಮುಖ್ ರಾವಲ್ ಹೇಳಿದ್ದಾರೆ.