ನವದೆಹಲಿ, ಜು 23 (DaijiworldNews/PY): ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ಮೇಲೆ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಶೇ.100ರಷ್ಟು ತನ್ನ ವ್ಯಕ್ತಿತ್ವವನ್ನು ನಿರ್ಮಿಸುವತ್ತ ಗಮನಹರಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಡಿರುವ ಅವರು, ಪ್ರಧಾನಿ ಮೋದಿ ಅವರು ಶೇ.100ರಷ್ಟು ತನ್ನ ವ್ಯಕ್ತಿತ್ವವನ್ನು ನಿರ್ಮಿಸುವಲ್ಲಿ ಗಮನಹರಿಸಿದ್ದಾರೆ. ಭಾರತದ ಸಂಸ್ಥೆಗಳು ಕೂಡಾ ಈ ಕಾರ್ಯದಲ್ಲಿ ನಿರತವಾಗಿವೆ ಎಂದಿದ್ದಾರೆ.
ಭಾರತ-ಚೀನಾ ಬಿಕ್ಕಟ್ಟು ವಿಚಾರದ ಬಗ್ಗೆ ಮಾತನಾಡಿರುವ ಅವರು, ನೀವು ಚೀನಾದೊಂದಿಗೆ ಧೈರ್ಯದಿಂದ ವ್ಯವಹರಿಸಿದರೆ, ಭಾರತ ಚೀನಾ ಬಿಕ್ಕಟ್ಟು ಬಗೆಹರಿಕೊಳ್ಳಲು ಸಾಧ್ಯ. ಚೀನಾ ದುರ್ಬಲಗೊಂಡಲ್ಲಿ ಸಮಸ್ಯೆ ಎದುರಾಗುತ್ತದೆ. ಚೀನಾದೊಂದಿಗಿನ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ ಜಾಗತಿಕವಾದ ನಿಲುವನ್ನು ಹೊಂದಿರಬೇಕು ಅಥವಾ ಸ್ವತಃ ಒಂದು ಯೋಚನೆಯನ್ನು ಹೊಂದಿರಬೇಕು. ಈ ಬಗ್ಗೆ ದೀರ್ಘವಾಗಿ ಯೋಚನೆ ಮಾಡದೇ ಇದ್ದಲ್ಲಿ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ನಾವು ನಮ್ಮ ನಡುವೆ ಹೋರಾಡುವುದನ್ನು ಬಿಟ್ಟು ರಾಜಕೀಯದತ್ತ ಗಮನಹರಿಸಬೇಕಾಗಿದೆ. ಓರ್ವ ಭಾರತೀಯ, ಭಾರತೀಯನೊಂದಿಗೆ ಹೋರಾಡುತ್ತಿದ್ದಾನೆ. ಇದು ನಮ್ಮ ಮುಂದೆ ಯಾವುದೇ ಸ್ಪಷ್ಟವಾದ ನಿಲುವು ಇಲ್ಲ ಎನ್ನುವುದನ್ನು ತೋರಿಸುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿಯನ್ನು ಪ್ರಶ್ನಿಸುವುದು ತನ್ನ ಜವಾಬ್ದಾರಿಯಾಗಿದೆ ಎಂದು ಗಾಂಧಿ ಹೇಳಿದ್ದು, ಇದರಿಂದಾಗಿ ಅವರು ತನ್ನ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ಉತ್ತರ ನೀಡುವುದು ಅವರ ಜವಾಬ್ದಾರಿಯಾಗಿದೆ. ಆದರೆ ಅವರಲ್ಲಿ ಯಾವುದೇ ಸ್ಪಷ್ಟವಾದ ನಿಲುವುಗಳಿಲ್ಲ ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ. ಹಾಗಾಗಿಯೇ ಚೀನಾ ಇನ್ನೂ ಇದೆ ಎಂದು ಹೇಳಿದ್ದಾರೆ.