ಕೋಲ್ಕತ್ತ, ಜು 23 (DaijiworldNews/PY): ಭಾರತದ ಮಾಜಿ ಫುಟ್ಬಾಲ್ ಆಟಗಾರ ಮೆಹ್ತಾಬ್ ಹುಸೈನ್ ಅವರು ಬಿಜೆಪಿ ಸೇರ್ಪಡೆಯಾದ 24 ಗಂಟೆಗಳಲ್ಲಿ ರಾಜಕೀಯ ತ್ಯಜಿಸಿದ್ದು, ಇದು ನನ್ನ ವೈಯುಕ್ತಿಕ ನಿರ್ಧಾರ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ನಾನು ಇಂದಿನಿಂದ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ನನ್ನ ಈ ನಿರ್ಧಾರಕ್ಕಾಗಿ ನನ್ನ ಎಲ್ಲ ಹಿತೈಷಿಗಳಿಗೆ ಕ್ಷಮೆಯಾಚಿಸುತ್ತೇನೆ. ರಾಜಕೀಯದಿಂದ ದೂರವಿರಲು ಇದು ನನ್ನ ವೈಯುಕ್ತಿಕ ನಿರ್ಧಾರ. ಈ ನಿರ್ಧಾರ ತೆಗೆದುಕೊಳ್ಳಲು ಯಾರೂ ನನ್ನನ್ನು ಒತ್ತಾಯಿಸಿಲ್ಲ ಎಂದು ತಿಳಿಸಿದ್ದಾರೆ.
ರಾಜಕೀಯಕ್ಕೆ ಸೇರ್ಪಡೆಯಾಗುವ ಹಠಾತ್ ನಡೆಗೆ ತನ್ನ ಕುಟುಂಬ ಹಾಗೂ ಹಿತೈಷಿಗಳು ನೊಂದಿದ್ದರು. ಹಾಗಾಗಿ ನಾನು ರಾಜಕೀಯವನ್ನು ತೊರೆದಿದ್ದು ನನ್ನ ವೈಯುಕ್ತಿಕ ವಿಚಾರ ಎಂದು ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಮಂಗಳವಾರ ಮುರಳೀಧರ್ ಸೇನ್ಲೇನ್ ಕಚೇರಿಯಲ್ಲಿ ಹುಸೈನ್ ಅವರಿಗೆ ಬಿಜೆಪಿ ಧ್ವಜವನ್ನು ಹಸ್ತಾಂತರಿಸುವ ಮೂಲಕ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದರು.
ಜನರ ಅಭಿಮಾನ ಗಳಿಸುವ ಕಾರಣದಿಂದ ಹಾಗೂ ಜನರದೊಂದಿಗೆ ಇರಲು ಬಯಸಿದ್ದರಿಂದ ನಾನು ರಾಜಕೀಯಕ್ಕೆ ಸೇರ್ಪಡೆಗೊಂಡೆ. ಆದರೆ, ನನ್ನನ್ನು ರಾಜಕಾರಣಿಯಾಗಿ ಸೇವೆ ಸಲ್ಲಿಸಲು ಬಯಸಿದ್ದ ಜನರು ನಾನು ರಾಜಕೀಯ ಸೇರಬಾರದು ಎಂದು ಹೇಳಿದ್ದರು. ಅವರಿಗೆ ನನ್ನನ್ನು ರಾಜಕಾರಣಿಯಾಗಿ ನೋಡಲು ಇಷ್ಟವಿರಲಿಲ್ಲ ಎಂದಿದ್ದಾರೆ.
ರಾಜಕೀಯಕ್ಕೆ ಹಠಾತ್ ಆಗಿ ಸೇರ್ಪಡೆಯಾಗುವ ನನ್ನ ನಿರ್ಧಾರವನ್ನು ನನ್ನ ಕುಟುಂಬವು ಬೆಂಬಲಿಸಲಿಲ್ಲ. ಅಲ್ಲದೇ, ನನ್ನ ಈ ತೀರ್ಮಾನದಿಂದ ನನ್ನ ಸ್ನೇಹಿತರು ಕೂಡಾ ಬೇಸರಗೊಂಡಿದ್ದರು. ಎಲ್ಲಾ ಸ್ಥಾನಗಳಿಂದ ಮಿಡ್ಫೀಲ್ಡ್ ಜನರಲ್ ಎಂದು ಜನರು ನೀಡಿರುವ ಈ ಹೆಸರು ನನಗೆ ತುಂಬಾ ಹತ್ತಿರವಾಗಿದೆ. ಯಾರ ಮೇಲೂ ನನಗೆ ದ್ವೇಷ, ಕೋಪವಿಲ್ಲ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಬೆದರಿಕೆಯ ಕಾರಣದಿಂದ ಹುಸೈನ್ ಅವರು ರಾಜಕೀಯ ತ್ಯಜಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.