ನವದೆಹಲಿ, ಜು 23 (DaijiworldNews/PY): ಏಮ್ಸ್ ಆಸ್ಪತ್ರೆಯ ಜೂನಿಯರ್ ವೈದ್ಯರೊಬ್ಬರು ಚಿಂತಾಜನಕ ಸ್ಥಿತಿಯಲ್ಲಿದ ರೋಗಿಗೆ ತನ್ನ ರಕ್ತ ನೀಡಿ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಮುಹಮ್ಮದ್ ಫವಾಜ್ (24) ರೋಗಿಗೆ ರಕ್ತದಾನ ಮಾಡಿದ ಜೂನಿಯರ್ ವೈದ್ಯ.
ಏಮ್ಸ್ ಆಸ್ಪತ್ರೆಯಲ್ಲಿದ್ದ ರೋಗಿಯೊಬ್ಬರು ರಕ್ತ ಸಂಬಂಧಿ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿದ್ದು, ರಕ್ತದ ಅವಶ್ಯಕತೆ ಇತ್ತು. ಆದರೆ, ತಕ್ಷಣವೇ ಅವರಿಗೆ ರಕ್ತ ಲಭ್ಯವಿಲ್ಲದ ಕಾರಣ ಫವಾಜ್ ಅವರು ರೋಗಿಗೆ ರಕ್ತ ನೀಡಲು ತೀರ್ಮಾನ ಮಾಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಫವಾಜ್, ರೋಗಿಯೊಬ್ಬರು ಕಾಲಿಗೆ ಗಂಭೀರವಾದ ಗಾಯಗೊಂಡಿದ್ದ ಕಾರಣ ತನ್ನ ಪತ್ನಿಯೊಂದಿಗೆ ಮಂಗಳವಾರ ಆಸ್ಪತ್ರೆಗೆ ಬಂದಿದ್ದರು. ಅವರು ವಿಷ ರಕ್ತ ಕಾಯಿಲೆ ಒಳಗಾಗಿದ್ದರು, ಅಲ್ಲದೇ, ಆ ಸೋಂಕು ವ್ಯಕ್ತಿಯ ಕಾಲಿನ ಪೂರ್ತಿ ವ್ಯಾಪಿಸಿತ್ತು. ಹಾಗಾಗಿ ವ್ಯಕ್ತಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ಅಲ್ಲದೇ, ಶಸ್ತ್ರಚಿಕಿತ್ಸೆಗೆ ರಕ್ತದ ಅವಶ್ಯಕತೆ ಕೂಡಾ ಇತ್ತು. ಈ ತುರ್ತು ಸಂದರ್ಭದ ವೇಳೆ ರೋಗಿಯ ಸಂಬಂಧಿಕರು ಯಾರು ಆಸ್ಪತ್ರೆಗೆ ಬಂದಿರಲಿಲ್ಲ. ಈ ಕಾರಣದಿಂದ ಫವಾಜ್ ಅವರು ತಾವೇ ರಕ್ತ ನೀಡಲು ತೀರ್ಮಾನ ಮಾಡಿದ್ದಾರೆ.
ಕೊರೊನಾದ ಈ ಸಂಕಷ್ಟದ ಸಂದರ್ಭ ರಕ್ತದ ಅವಶ್ಯಕತೆ ಇದ್ದು, ನಾನೊಬ್ಬ ವೈದ್ಯನಾಗಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಶಸ್ತ್ರಚಿಕಿತ್ಸೆಗಾಗಿ ರೋಗಿಗೆ ತುರ್ತಾಗಿ ರಕ್ತದ ಅಗತ್ಯ ಇತ್ತು. ಅಲ್ಲದೇ, ರಕ್ತದ ವ್ಯವಸ್ಥೆ ಮಾಡಲು ರೋಗಿಯ ಕುಟುಂಬದವರಿಗೆ ಹೆಚ್ಚು ಸಮಯದ ಅವಶ್ಯಕತೆಯೂ ಕೂಡಾ ಇತ್ತು. ಹಾಗಾಗಿ ಈ ತೀರ್ಮಾನ ಮಾಡಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭ ರೋಗಿಯ ಪತ್ನಿ ಕೂಡಾ ರಕ್ತದಾನ ಮಾಡುವ ಪರಿಸ್ಥಿಯಲ್ಲಿರಲಿಲ್ಲ. ಈ ಕಾರಣದಿಂದ ನಾನು ರಕ್ತದಾನ ಮಾಡಿದೆ. ಬಳಿಕ ಜೂನಿಯರ್ ವೈದ್ಯ ಫವಾಜ್ ಹಾಗೂ ವೈದ್ಯರ ತಂಡ ರೋಗಿಯ ಶಸ್ತ್ರಚಿಕಿತ್ಸೆ ಮಾಡಿದ್ಧಾರೆ.