ನವದೆಹಲಿ, ಜು 23 (DaijiworldNews/PY): ಭಾರತೀಯ ಸೇನೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಸೇನೆ ಗುರುವಾರ ತಿಳಿಸಿದೆ.
ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಮಾತನಾಡಿ, ಸರ್ಕಾರದ ಆದೇಶವು ಸೈನ್ಯದಲ್ಲಿ ದೊಡ್ಡ ಹುದ್ದೆಗಳನ್ನು ನಿರ್ವಹಿಸಲು ಮಹಿಳಾ ಅಧಿಕಾರಿಗಳನ್ನು ಸಬಲೀಕರಣಗೊಳಿಸಲು ಕೇಂದ್ರ ಸರ್ಕಾರದ ಈ ಆದೇಶ ನೆರವಾಗಿದೆ. ಅಲ್ಲದೇ, ಎಸ್ಎಸ್ಸಿ ಮಹಿಳಾ ಅಧಿಕಾರಿಗಳಿಗೆ ಭಾರತೀಯ ಸೇನೆಯ ಎಲ್ಲಾ10 ಹುದ್ದೆಗಳಲ್ಲಿಯೂ ಕೂಡಾ ಶಾಶ್ವತ ಆಯೋಗದ ಅನುದಾನವನ್ನು ಕೇಂದ್ರದ ಆದೇಶವು ನಿರ್ದಿಷ್ಟಪಡಿಸಿದೆ ಎಂದು ಹೇಳಿದರು.
ಮಹಿಳಾ ಅಧಿಕಾರಿಗಳ ಶಾಶ್ವತ ಆಯೋಗ ಲಭ್ಯವಾಗುತ್ತಿರುವ 10 ವಿಭಾಗಗಳಲ್ಲಿ ಸೇನಾ ವಾಯು ರಕ್ಷಣಾ, ಸಂಕೇತಗಳು, ಎಂಜಿನಿಯರ್ಗಳು, ಸೇನಾ ವಾಯುಯಾನ, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ಗಳು, ಸೇನಾ ಸೇವಾ ದಳ ಮತ್ತು ಗುಪ್ತಚರ ದಳಗಳು ಸೇರಿವೆ ಎಂದಿದ್ದಾರೆ.
ಎಲ್ಲಾ ಎಸ್ಎಸ್ಸಿ ಮಹಿಳಾ ಅಧಿಕಾರಿಗಳು ತಮ್ಮ ಆಯ್ಕೆಯನ್ನು ಮತ್ತು ಸಂಪೂರ್ಣ ಅಗತ್ಯ ದಾಖಲಾತಿಗಳನ್ನು ಚಲಾಯಿಸಿದ ಕೂಡಲೇ ಅವರ ಆಯ್ಕೆ ಮಂಡಳಿಯನ್ನು ನಿಗದಿಪಡಿಸಲಾಗುವುದು ಎಂದು ಹೇಳಿದರು.