ನವದೆಹಲಿ, ಜು 24 (DaijiworldNews/PY): ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಕಡಿಮೆ ವೆಚ್ಚದ ಪ್ರಕ್ರಿಯೆಯಲ್ಲಿ ವಿಜ್ಞಾನ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ ಅಭಿವೃದ್ಧಿಪಡಿಸಿದ ಫವಿಪಿರವಿರ್ ಔಷಧಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಔಷಧೀಯ ಸಂಸ್ಥೆ ಸಿಪ್ಲಾ ಸಜ್ಜಾಗಿದೆ.
ಮೂಲತಃ ಫ್ಯುಜಿ ಫಾರ್ಮಾ ಕಂಪೆನಿ ಜಪಾನ್ನಲ್ಲಿ ಅಭಿವೃದ್ದಿಪಡಿಸಿದ ಫವಿಪಿರವರ್ ಎಂಬ ಆಫ್-ಪೇಟೆಂಟ್ ಆಂಟಿ-ವೈರಲ್ ಔಷಧವು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಕ್ಲಿನಿಕಲ್ ಪ್ರಯೋಗಗಳಲ್ಲಿ ಭರವಸೆ ಮೂಡಿಸಿದೆ.
ಸ್ಥಳೀಯವಾಗಿ ಲಭ್ಯವಿರುವ ಕಚ್ಚಾವಸ್ತುಗಳನ್ನು ಬಳಸಿಕೊಂಡು ಈ ಸಕ್ರಿಯ ಔಷಧೀಯ ಘಟಕಾಂಶವನ್ನು (ಎಪಿಐ) ಸಂಶ್ಲೇಷಿಸಲು ವೆಚ್ಚದಾಯಕ ಪ್ರಕ್ರಿಯೆಯನ್ನು ಸಿಎಸ್ಐಆರ್ ಹಾಗೂ ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆಯು ಅಭಿವೃದ್ಧಿಪಡಿಸಿದ್ದು, ಅಲ್ಲದೇ, ಔಷಧ ಉತ್ಪಾದನೆಯ ಸಲುವಾಗಿ ಈ ತಂತ್ರಜ್ಞಾನವನ್ನು ಸಿಪ್ಲಾಕ್ಕೆ ವರ್ಗಾಯಿಸಲಾಯಿತು.
ಸಿಪ್ಲಾ ತನ್ನ ಉತ್ಪಾದನಾ ಸೌಲಭ್ಯದಲ್ಲಿ ಈ ಪ್ರಕ್ರಿಯೆಯನ್ನು ಹೆಚ್ಚಿಸಿದ್ದು, ಭಾರತದಲ್ಲಿ ಈ ಔಷಧವನ್ನು ಬಿಡುಗಡೆ ಮಾಡಲು ಡಿಸಿಜಿಐ (ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಅವರ ಅನುಮತಿ ಕೇಳಿದೆ. ಡಿಸಿಜಿಐಯು ಕೊರೊನಾ ಸೋಂಕಿತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಉತ್ಪನ್ನವನ್ನು ಪ್ರಾರಂಭಿಸಲು ಅನುಮತಿ ನೀಡಿದ್ದು, ಸಿಪ್ಲಾ ಈಗ ಎಲ್ಲ ಸಿದ್ಧತೆ ಮಾಡಿದೆ ಎಂದು ಹೇಳಿಕೆ ತಿಳಿಸಿದೆ.
ಅಭಿವೃದ್ಧಿಯ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಎಸ್. ಚಂದ್ರಶೇಖರ್ ಅವರು, ತಂತ್ರಜ್ಞಾನವು ತುಂಬಾ ಪರಿಣಾಮಕಾರಿಯಾಗಿದ್ದು, ಅಲ್ಪಾವಧಿಯಲ್ಲಿಯೇ ಹೆಚ್ಚಿನ ಪ್ರಮಾಣದ ಔಷಧವನ್ನು ತಯಾರಿಸಲು ಈ ತಂತ್ರಜ್ಞಾನ ಅನುವು ಮಾಡಿಟ್ಟಿದೆ ಎಂದು ತಿಳಿಸಿದರು
ಸಿಎಸ್ಐಆರ್ ಶೀಘ್ರದಲ್ಲೇ ಮರುಉತ್ಪಾದಿತ ಔಷಧಿಗಳನ್ನು ತರಲು ಸಿಪ್ಲಾದೊಂದಿಗಿನ ಈ ಸಹಭಾಗಿತ್ವವು ಹೇಗೆ ಬದ್ಧವಾಗಿದೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಹೇಳಿದರು.