ಬೆಂಗಳೂರು, ಜು 24 (Daijiworld News/MSP): ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಭಾರೀ ಭ್ರಷ್ಟಚಾರ ಎಸಗಿದೆ ಎಂದು ವಿಪಕ್ಷ ಆರೋಪಿಸಿದ್ದು ಇದಕ್ಕೆ ಸರ್ಕಾರದ ಐವರು ಸಚಿವರು ಸರ್ಕಾರದ ವತಿಯಿಂದ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ತಿರುಗೇಟು ನೀಡಿದ್ದಾರೆ.ಈ ವಿಚಾರವೀಗ ವಿಪಕ್ಷ - ಪ್ರತಿಪಕ್ಷದ ಆರೋಪ - ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಕೊರೊನಾ ನಿರ್ವಹಣೆಯ ವೈದ್ಯಕೀಯ ಪರಿಕರವಾದ ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಆರ್ ಅಶೋಕ್ ತಿರುಗೇಟು ನೀಡಿದ್ದು ಇದು ಇವರಿಬ್ಬರ ನಡುವೆ ಟ್ವೀಟ್ ವಾರ್ ಗೆ ಕಾರಣವಾಗಿದೆ.
ಬಿಜೆಪಿ ಸರ್ಕಾರ 2 ಸಾವಿರ ಕೋಟಿ ರೂ. ಅಕ್ರಮ ಎಸಗಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪ ಭಾರೀ ಮಾಜಿ ಸಿಎಂ ಆರೋಪಕ್ಕೆ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿ, "ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದರೆ2 019ರಲ್ಲಿಯೂ ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮ ನಡೆದಿದೆ 2019ರಲ್ಲಿ ಚಂದ್ರಲೋಕದಿಂದ ವೆಂಟಿಲೇಟರ್ ಬಂದಿತ್ತಾ ಎಂದು ತಿರುಗೇಟು ನೀಡಿದ್ದರು.
ಇದಕ್ಕೆ ಪ್ರತ್ಯುತ್ತರ ನೀಡಿರುವ ಸಿದ್ದರಾಮಯ್ಯ, “ಆಗ ಅಕ್ರಮವಾಗಿದ್ದರೆ ವಿರೋಧ ಪಕ್ಷದಲ್ಲಿದ್ದ ನೀವ್ಯಾಕೆ ಆಗಲೇ ಪ್ರಶ್ನಿಸಿರಲಿಲ್ಲ," ಎಂದು ಕೇಳಿದ್ದಾರೆ. ಜೊತೆಗೆ "ಆ ಕಾಲದಲ್ಲಿ ನೀವು ಮಂಗಳ ಗ್ರಹದಲ್ಲಿ ಇದ್ರಾ?" ಎಂದು ಕಾಲೆಳೆದಿದ್ದಾರೆ.