ನವದೆಹಲಿ, ಜು 24 (DaijiworldNews/PY): ಹೆಚ್ಚುತ್ತಿರುವ ಅಪರಾಧದ ಬಗ್ಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಯು ಗೂಂಡಾಗಳ ಮುಂದೆ ಶರಣಾಗಿದೆ, ಯಾರೂ ಎಲ್ಲಿಯೂ ಸುರಕ್ಷಿತವಾಗಿಲ್ಲ ಎಂದಿದ್ದಾರೆ.
ಕಾನ್ಪುರದ ಸಂಜೀತ್ ಯಾದವ್ ಎನ್ನುವವರನ್ನು ಹಣ ಸುಲಿಗೆಗಾಗಿ ಅಪಹರಣಕಾರರು ಹತ್ಯೆ ಮಾಡಿದ್ದರು. ಈ ವಿಚಾರವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಮನೆ, ರಸ್ತೆ, ಕಚೇರಿ ಎಲ್ಲಿಯೇ ಆಗಿರಲಿ, ಯಾರೂ ಎಲ್ಲಿಯೂ ಸುರಕ್ಷಿತವಾಗಿಲ್ಲ ಎಂದರು.
ಕಾನ್ಪುರದಲ್ಲಿ ಅಪಹರಣಕ್ಕೊಳಗಾದ ಸಂಜೀತ್ ಯಾದವ್ ಅಪಹರಕಾರರಿಂದ ಹತ್ಯೆಯಾಗಿದ್ದು, ಸಂಜೀತ್ ಯಾದವ್ ಅವರ ಅವರಿಂದ ಪಡೆದ ಹಣವನ್ನು ಪೊಲೀಸರು ಅಪಹರಣಕಾರರಿಗೆ ನೀಡಿದ್ದರು. ಬಳಿಕ ಆತನನ್ನೂ ಹತ್ಯೆ ಮಾಡಲಾಯಿತು. ರಾಜ್ಯದಲ್ಲಿ ಹೊಸ ಗೂಂಡಾರಾಜ್ ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿಸಿದರು.