ಬೆಂಗಳೂರು, ಜು 25 (DaijiworldNews/PY): ಕೊರೊನಾ ತ್ವರಿತ ಪರೀಕ್ಷೆಯ ಆರ್ಟಿ-ಪಿಸಿಆರ್ ಹಾಗೂ ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆಗಳಿಗೆ ಸರ್ಕಾರ ದರ ನಿಗದಿಪಡಿಸಿದೆ.
ಸ್ಕ್ರೀನಿಂಗ್ ಹಾಗೂ ದೃಢೀಕರಣ ಪರೀಕ್ಷೆಗೆ ಖಾಸಗಿ ಪ್ರಯೋಗಾಲಯಗಳಿಗೆ ಸರ್ಕಾರದಿಂದ ಕಳುಹಿಸುವ ಮಾದರಿಗಳು, ಆರ್ಟಿ-ಪಿಸಿಆರ್ ಪರೀಕ್ಷೆ ದರ ಪಿಪಿಇ ಕಿಟ್ನ ವೆಚ್ಚ ಒಳಗೊಂಡಂತೆ 2000 ರೂ ದರ ನಿಗದಿ ಮಾಡಲಾಗಿದೆ.
ಖಾಸಗಿ ವ್ಯಕ್ತಿಗಳ ಮಾದರಿ, ಸ್ಕ್ರೀನಿಂಗ್ ಟೆಸ್ಟ್, ಹಾಗೂ ದೃಢೀಕರಣ ಪರೀಕ್ಷೆಗೆ 3000 ರೂ. ನಿಗದಿಯಾಗಿದ್ದು, ಖಾಸಗಿ ಪ್ರಯೋಗಾಲಯಗಳಲ್ಲಿ ಖಾಸಗಿ ಮಾದರಿಗಳ ಕ್ಷಿಪ್ರ ಆಂಟಿಜೆನ್ ಪರೀಕ್ಷೆ ಹಾಗೂ ಪಿಪಿಇ ಕಿಟ್ ದರ ಸೇರಿದಂತೆ 700 ರೂ. ಅನ್ನು ಸರ್ಕಾರ ನಿದಿ ಪಡಿಸಿದ್ದು ಆದೇಶ ಹೊರಡಿಸಿದೆ.