ನವದೆಹಲಿ, ಜು 25 (DaijiworldNews/PY): ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯ ಮೂಲಕ ಸ್ವೀಕರಿಸಿದ ಮನವಿಯ ಪ್ರಕಾರ ಭಾರತವು ಸುಮಾರು 10 ಲಕ್ಷ ಡಾಲರ್ ಮೌಲ್ಯದ ಔಷಧ ಹಾಗೂ ಇತರ ಉಪಕರಣಗಳನ್ನು ಉತ್ತರ ಕೊರಿಯಾಕ್ಕೆ ಕಳುಹಿಸಲು ಒಪ್ಪಿಗೆ ಸೂಚಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ವೈದ್ಯಕೀಯ ಪೂರೈಕೆ ಕೊರತೆಯಿಂದ ಕಂಗೆಟ್ಟಿರುವ ಉತ್ತರ ಕೊರಿಯಾದ ಜನರ ವಿಚಾರವನ್ನು ಪರಿಗಣಿಸಿರುವ ಭಾರತ ಸರ್ಕಾರವು 10 ಲಕ್ಷ ಡಾಲರ್ ಮೌಲ್ಯದ ಕ್ಷಯರೋಗ ಔಷಧಿಗಳನ್ನು ನೀಡಲು ನಿರ್ಧರಿಸಿದೆ ಇಲಾಖೆಯ ವಕ್ತಾರ ತಿಳಿಸಿದ್ದಾರೆ.
ಈ ಔಷಧಗಳನ್ನು ಉತ್ತರ ಕೊರೊಯಾದಲ್ಲಿ ಡಬ್ಲ್ಯೂಎಚ್ಒ ನಿರ್ವಹಿಸುತ್ತಿರುವ ಕ್ಷಯ ರೋಗ ನಿವಾರಣಾ ಚಟುವಟಿಕೆಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ಕಳುಹಿಸಿಕೊಡಲಾಗುತ್ತದೆ. ಉತ್ತರ ಕೊರಿಯಾದ ಭಾರತೀಯ ರಾಯಭಾರಿ ಅತುಲ್ ಮಲ್ಹಾರಿ ಗೋಟ್ಸುರ್ವೆ ಅವರು ಡಬ್ಲ್ಯೂಎಚ್ಒ ಪ್ರತಿನಿಧಿಯ ಸಮ್ಮುಖದಲ್ಲಿ ಔಷಧಿಗಳನ್ನು ಡಿಪಿಆರ್ಕೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.