ಭೋಪಾಲ್, ಜು. 25 (DaijiworldNews/MB) : ದೇಶದಲ್ಲಿ ಕೊರೊನಾ ಸೋಂಕು ತನ್ನ ಕರಾಳ ಹಸ್ತವನ್ನು ಚಾಚುತ್ತಲ್ಲೇ ಇದ್ದು ಈಗ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ಕೊರೊನಾ ಪಾಸಿಟಿವ್ ಆಗಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಸ್ವತಃ ಶಿವರಾಜ್ ಸಿಂಗ್ ಚೌಹಾಣ್ ಅವರೇ ಟ್ವೀಟ್ ಮೂಲಕ ತಿಳಿಸಿದ್ದು, ''ನನ್ನ ಪ್ರಿಯ ದೇಶವಾಸಿಗಳೇ, ನನಗೆ ಕೊರೊನಾ ಲಕ್ಷಣಗಳು ಇದ್ದ ಕಾರಣ ಪರೀಕ್ಷೆ ನಡೆಸಿದಾಗ ವರದಿಯು ಪಾಸಿಟಿವ್ ಆಗಿದೆ. ನನ್ನ ಎಲ್ಲಾ ಸಹೋದ್ಯೋಗಿಗಳು ಹಾಗೂ ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಹಾಗೆಯೇ ನನ್ನ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್ಗೆ ಒಳಗಾಗಿ ಎಂದು ನಾನು ಮನವಿ ಮಾಡುತ್ತೇನೆ'' ಎಂದು ತಿಳಿಸಿದ್ದಾರೆ.
''ಹಾಗೆಯೇ ನಾನು ಕೊರೊನಾದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇನೆ. ವೈದ್ಯರ ಸಲಹೆಯ ಪ್ರಕಾರ ನಾನು ಕ್ವಾರಂಟೈನ್ಗೆ ಒಳಗಾಗಿದ್ದೇನೆ. ನನ್ನ ರಾಜ್ಯದ ಜನರು ಜಾಗರೂಕರಾಗಿರಿ ಎಂದು ನಾನು ಮನವಿ ಮಾಡುತ್ತೇನೆ. ಸ್ವಲ್ಪ ಅಸಡ್ಡೆಯು ಕೂಡಾ ಕೊರೊನಾಗೆ ಆಹ್ವಾನವಾಗುತ್ತದೆ. ಕೊರೊನಾದಿಂದ ರಕ್ಷಣೆ ಪಡೆಯಲು ನಾನು ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ. ಆದರೆ ಜನರು ಅನೇಕ ವಿಷಯವನ್ನು ಮುಂದಿಟ್ಟು ನನ್ನನ್ನು ಭೇಟಿಯಾಗುತ್ತಿದ್ದರು'' ಎಂದು ಹೇಳಿದ್ದಾರೆ.
''ಹಾಗೆಯೇ ರಾಜ್ಯದ ಕೊರೋನಾ ಪರಿಸ್ಥಿತಿ ಕುರಿತಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ಸಭೆ ನಡೆಸುತ್ತೇನೆ'' ಎಂದು ತಿಳಿಸಿದ್ದಾರೆ.