ಶ್ರೀನಗರ, ಜು 25 (DaijiworldNews/PY): ಶನಿವಾರ ಮುಂಜಾನೆ ಶ್ರೀನಗರದ ಹೊರವಲಯದಲ್ಲಿ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಸದೆಬಡೆದಿದ್ದಾರೆ.
ಇಂದು ಮುಂಜಾನೆ ನಡೆದ ಎನ್ಕೌಂಟರ್ ಶ್ರೀನಗರದ ಹೊರವಲಯದಲ್ಲಿನ ರಂಭೀರ್ಗಡ್ ಎಂಬಲ್ಲಿ ನಡೆದಿದ್ದು, ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದು, ಉಳಿದ ಉಗ್ರರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು, ಭದ್ರತಾ ಪಡೆಗಳು ಮಾಹಿತಿ ಮೇರೆ ಸ್ಥಳಕ್ಕೆ ಧಾವಿಸಿದ್ದು, ಈ ಸಂದರ್ಭ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಗೆ ಪ್ರತಿ ದಾಳಿ ನಡೆಸಿದ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಕಾರ್ಯಾಚರಣೆಯ ಸಂದರ್ಭ ಓರ್ವ ಭಾರತೀಯ ಯೋಧನಿಗೂ ಗಾಯವಾಗಿದ್ದು, ಅವರನ್ನು 92 ಬೇಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.