ನವದೆಹಲಿ, ಜು 25 (DaijiworldNews/PY): ದೇಶದಾದ್ಯಂತ ಆಗಸ್ಟ್ನಲ್ಲಿ ಸಿನಿಮಾ ಮಂದಿರಗಳನ್ನು ಮತ್ತೆ ತೆರೆಯಲು ಅನುಮತಿ ನೀಡುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.
ಶುಕ್ರವಾರ ಸಿಐಐ ಮಾಧ್ಯಮ ಸಮಿತಿಯೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ್ದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಮಿಕ್ ಖರೆ ಅವರು, ಸಿನಿಮಾ ಮಂದಿರಗಳನ್ನು ಆಗಸ್ಟ್ನಲ್ಲಿ ಮತ್ತೆ ತೆರೆಯಲು ಅನುಮತಿ ನೀಡುವಂತೆ ಕೇಳಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಭಾರತದಾದ್ಯಂತ ಸಿನಿಮಾ ಮಂದಿರಗಳನ್ನು ಪುನಃ ತೆರೆಯಲು ಅನುಮತಿ ನೀಡಬೇಕೆಂದು ಈ ಹಿಂದೆ ಅಜಯ್ ಭಲ್ಲಾ ಅವರು ಶಿಫಾರಸು ಮಾಡಿದ್ದರು ಎಂದು ಖರೆ ಹೇಳಿದರು.
ಸಿನಿಮಾ ಮಂದಿರದಲ್ಲಿ ಮೊದಲನೇ ಸಾಲಿನಲ್ಲಿ ಹಾಗೂ ಅದರ ನಂತರದ ಸಾಲುಗಳನ್ನು ಖಾಲಿ ಇರಿಸಿ ಉಳಿದ ಸಾಲುಗಳಲ್ಲಿ ಕುಳಿತುಕೊಳ್ಳುವಂತೆ ಸಲಹೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಿನಿಮಾ ಮಂದಿರಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದೆ ಸಚಿವಾಲಯ ನೀಡಿದ ಶಿಫಾರಸಿನಲ್ಲಿ ತಿಳಿಸಿದೆ.
ಮಾಧ್ಯಮ ಸಿಇಓಗಳಾದ ಎನ್.ಪಿ. ಸೋನಿಯ ಸಿಂಗ್, ಸ್ಯಾಮ್ ಬಲ್ಸರಾ (ಮ್ಯಾಡಿಸನ್), ಮೇಘಾ ಟಾಟಾ, (ಡಿಸ್ಕವರಿ), ಗೌರವ್ ಗಾಂಧಿ (ಅಮೆಜಾನ್ ಪ್ರೈಮ್), ಮನೀಶ್ ಮಹೇಶ್ವರಿ (ಟ್ವಿಟರ್), ಎಸ್. ಶಿವಕುಮಾರ್ (ಬೆನೆಟ್ ಕೋಲ್ಮನ್ ಮತ್ತು ಕೋ ಲಿಮಿಟೆಡ್), ಕೆ. ಮಾಧವನ್, ಸ್ಟಾರ್ ಹಾಗೂ ಡಿಸ್ನಿ ಮತ್ತು ಸಿಐಐ ಮಾಧ್ಯಮ ಸಮಿತಿಯ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಂಡಿದ್ದರು.