ಬಿಹಾರ, ಜು 25 (DaijiworldNews/PY): ಭಾರತ-ನೇಪಾಳ ಗಡಿಯಲ್ಲಿರುವ ಹಾರೋಖರ್ ಪೊಲೀಸ್ ಠಾಣೆ ವ್ಯಾಪ್ತಿಯ ಖರ್ಸಲ್ವಾ ಗ್ರಾಮದಲ್ಲಿ ಇಬ್ಬರು ಭಾರತೀಯ ಗ್ರಾಮಸ್ಥರನ್ನು ನೇಪಾಳದ ಸಶಸ್ತ್ರ ಪೊಲೀಸ್ ಪಡೆ ಗಾಯಗೊಳಿಸಿದ್ದು, ನೆರೆದ ಜನ ಸಮೂಹವನ್ನು ಚದುರಿಸಲು ಗುಂಡು ಹಾರಿಸಿದ್ದಾರೆ.
ಖಾರ್ಸಲ್ವಾ ಗ್ರಾಮದ ಸೀಮಾ ದೇವಿ ಹಾಗೂ ಅವರ ಪತಿ ರವೀಂದ್ರ ಪ್ರಸಾದ್ ಅವರಿಗೆ ನೇಪಾಳದ ಸಶಸ್ತ್ರ ಪೊಲೀಸ್ ಪಡೆಯ ಜವಾನರು ಥಳಿಸಿದ್ದಾರೆ. ಎನ್ನಲಾಗಿದೆ. ಪ್ರತ್ಯಕ್ಷದರ್ಶಿಗಳಿಗಳಾದ ದೇವಿ ಹಾಗೂ ಕುಂದನ್ ಕುಮಾರ್ ಎಂಬುವವರು ಸಂಜೆ 4 ಗಂಟೆಯ ಸುಮಾರಿಗೆ ಜಾನುವಾರುಗಳಿಗೆ ಮೇವು ತರಲು ನೇಪಾಳದ ಭೂಪ್ರದೇಶದ ನಾರ್ಕಟಿಯಾಗೆ ಹೋಗಿದ್ದರು. ಆ ಸಂದರ್ಭ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ನೇಪಾಳದ ಸಶಸ್ತ್ರ ಪೊಲೀಸ್ ಪಡೆಯು ಮಹಿಳೆಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದು ಹಾಗೂ ಆಕೆಗೆ ಥಳಿಸಿದ್ದಾಗಿ ಘೋಡಾಸಹಾನ್ ನಿವಾಸಿ ಹಾಗೂ ಜೆಡಿಯು ರಾಜ್ಯ ಪರಿಷತ್ ಸದಸ್ಯ ರಾಮ್ ಪುಕರ್ ಸಿನ್ಹಾ ಹೇಳಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು, ಸೀಮಾ ದೇವಿ ಹಾಗೂ ಆಕೆಯ ಪತಿಯನ್ನು ರಕ್ಷಿಸಲು ಧಾವಿಸಿದ್ದು, ಈ ವೇಳೆ ಪೊಲೀಸರು ಅವರನ್ನು ಬಂಧಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪತ್ನಿಗೆ ಪೊಲೀಸರು ಹೊಡೆಯುತ್ತಿದ್ದ ಸಂದರ್ಭ ನಾನು ತಡೆಯಲು ಮುಂದಾದಾಗ ನನಗೆ ಕೂಡಾ ಹೊಡೆದು ಠಾಣೆಗೆ ಕರೆದುದೊಯ್ದರು. ಆದರೆ, ಇದಕ್ಕೂ ಮೊದಲು ನನ್ನ ಪತ್ನಿಯನ್ನು ಬಿಡುಗಡೆ ಮಾಡಿದ್ದಾರೆ ಎಂದು ರವೀಂದ್ರ ಪ್ರಸಾದ್ ತಿಳಿಸಿದ್ದಾರೆ.
ಮೊದಲು ಪೊಲೀಸರು ನನ್ನ ಜೊತೆ ಇದ್ದ ಕುಂದನ್ ಕುಮಾರ್ ಅವರಿಗೆ ಹೊಡೆದರು. ನಾನು ಅವರ ರಕ್ಷಣೆಗೆಂದು ಹೋದಾಗ ಅವರು ನನ್ನ ಬಳಿ ಬಂದರು ಎಂದು ಹೇಳಿದರು.
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ, ನೇಪಾಳದ ಸಶಸ್ತ್ರ ಪೊಲೀಸ್ ಪಡೆ ಗಾಳಿಯಲ್ಲಿ ಗುಂಡು ಹಾರಿಸಿದ ಬಳಿಕ ಘೋಡಾಸನ್ ಉದ್ದಕ್ಕೂ ಗಡಿಯಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡಿತು. ಈ ವೇಳೆ ಖಾರ್ಸಲ್ವಾ ಹಾಗೂ ನೆರೆಯ ಹಳ್ಳಿಯಿಂದ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಗಡಿಯಲ್ಲಿ ಒಟ್ಟುಗೂಡಿದರು. ಕೆಲವು ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಭಾರತದ ಕಡೆಗೆ ಬಂದಿದ್ದ ಎಪಿಎಫ್ ಜವಾನರನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ.
ಏತನ್ಮಧ್ಯೆ, ಸಿಕರಹನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಜ್ಞಾನ ಪ್ರಕಾಶ್ ಮತ್ತು ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ಜೊತೆಗೆ ಸೀಮಾ ಸಶತ್ರ ಸೀಮಾ ಬಾಲ್ (ಎಸ್ಎಸ್ಬಿ) ಅಧಿಕಾರಿಗಳು ಮತ್ತು ಜವಾನರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದ್ದಾರೆ.
ರಾತ್ರಿ 11.30 ರ ಸುಮಾರಿಗೆ ರವೀಂದ್ರ ಪ್ರಸಾದ್ ಮತ್ತು ಎಪಿಎಫ್ ಜವಾನ್ ಅವರನ್ನು ಎರಡೂ ಕಡೆಯವರು ಮುಕ್ತಗೊಳಿಸಿದ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು ಎಂದು ಜೆಡಿಯು ಮುಖಂಡ ರಾಮ್ ಪುಕರ್ ಸಿನ್ಹಾ ಹೇಳಿದ್ದಾರೆ.
ಎಸ್ಎಸ್ಬಿಯ 20 ನೇ ಬೆಟಾಲಿಯನ್ನ ಕಮಾಂಡೆಂಟ್ ತಪನ್ ಕುಮಾರ್ ದಾಸ್ ಅವರನ್ನು ಸಂಪರ್ಕಿಸಿದಾಗ, ಮಹಿಳೆಯು, ಎಪಿಎಫ್ ಜವಾನನನ್ನು ಕುಡಗೋಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.