ಬೆಂಗಳೂರು, ಜು. 25 (DaijiworldNews/MB) : ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಅಂಚೆ ಇಲಾಖೆ ಆನ್ಲೈನ್ 'ರಾಖಿ ಪೋಸ್ಟ್' ಪ್ರಾರಂಭ ಮಾಡಿದೆ.
ಕೊರೊನಾ ಕಾರಣದಿಂದ ಜನರು ಹೊರ ಹೋಗುವುದು ಅಪಾಯಕಾರಿ ಎಂದು ಅರಿತ ಕರ್ನಾಟಕ ಅಂಚೆ ಇಲಾಖೆ ಆನ್ಲೈನ್ ರಾಖಿ ಖರೀದಿ ಮತ್ತು ರವಾನೆ ಸೇವೆಯನ್ನು ಆರಂಭಿಸಿದೆ. ಅಂಚೆ ಇಲಾಖೆಯ ವೆಬ್ಸೈಟ್ನಲ್ಲಿ ಇಷ್ಟವಾದ ರಾಖಿಯನ್ನು ಆನ್ಲೈನ್ ಮೂಲಕವೇ ಖರೀದಿಸುವಂತೆ ತಿಳಿಸಲಾಗಿದ್ದು ಹಬ್ಬ ದಿನದಂದು ರಾಖಿ ಮನೆಗೆ ತಲುಪುತ್ತದೆ ಎಂದು ತಿಳಿಸಿದೆ.
ಹಾಗೆಯೇ ಮನೆಯಲ್ಲಿದ್ದೇ ಲಡಾಖ್ ಗಡಿಯಲ್ಲಿರುವ ಯೋಧರಿಗೂ ಅಂಚೆ ಮೂಲಕ ರಾಖಿ ರವಾನಿಸಬಹುದಾಗಿದೆ.