ಬಳ್ಳಾರಿ, ಜು 26 (Daijiworld News/MSP): ರಾಜ್ಯದಲ್ಲಿ ಮತ್ತೋರ್ವ ಜನಪ್ರತಿನಿಧಿಗೂ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಅರಣ್ಯ ಖಾತೆ ಸಚಿವ, ಹೊಸಪೇಟೆ ಶಾಸಕರಾಗಿರುವ ಆನಂದ್ ಸಿಂಗ್ ಅವರಿಗೆ ಕೊರೊನಾ ಸೋಂಕು ತಗುಲಿದೆ.
ಜು.24 ರಂದು ಕೋವಿಡ್ ಟೇಸ್ಟ್ ಮಾಡಿಸಿದ್ದ ಆನಂದ್ ಸಿಂಗ್ ಅವರಿಗೆ ಶುಕ್ರವಾರ ರಾತ್ರಿ ವರದಿ ಸಿಕ್ಕಿದ್ದು ಕೊರೊನಾ ಪಾಸಿಟಿವ್ ಇರುವುದು ಖಚಿತವಾಗಿದೆ.
ರೋಗಲಕ್ಷಣವಿಲ್ಲದ ಕಾರಣ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಿವಾಸದಲ್ಲಿ ಆನಂದ್ ಸಿಂಗ್ ಚಿಕಿತ್ಸೆ ಪಡೆಯಲಿದ್ದಾರೆ. ಯಾವುದೇ ರೋಗಲಕ್ಷಣವಿಲ್ಲದೆ ಇದ್ದರೂ ಸಚಿವರ ಕಾರು ಚಾಲಕನಿಗೆ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಸ್ವಯಂಪ್ರೇರಿತರಾಗಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರೆಂದು ಕುಟುಂಬ ಮೂಲಗಳು ಹೇಳಿದೆ