ನವದೆಹಲಿ, ಜು. 26 (DaijiworldNews/MB) : ಐಸಿಎಂಆರ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಮೇಡ್ ಇನ್ ಇಂಡಿಯಾ ಕೋವಾಕ್ಸಿನ್ ಕೊರೊನಾವೈರಸ್ ಲಸಿಕೆಯ ಪ್ರಯೋಗದ ಭಾಗವಾಗಿ ಹಂತ -1 ರ ಭಾಗ 1 ಪೂರ್ಣವಾಗಿದ್ದು ಈಗ ಹಂತ -1 ರ ಭಾಗ 1 ರ ಅಡಿಯಲ್ಲಿ ಶನಿವಾರ ಆರು ಜನರ ಮೇಲೆ ಈ ಲಸಿಕೆ ಪ್ರಯೋಗ ಆರಂಭಿಸಲಾಗಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿರುವ ಪಿಜಿಐ ರೋಹ್ಟಕ್ನ ಲಸಿಕೆ ಪ್ರಯೋಗ ತಂಡದ ಪ್ರಧಾನ ತನಿಖಾಧಿಕಾರಿ ಡಾ.ಸವಿತಾ ವರ್ಮಾ ಹಂತ -1 ರ ಭಾಗ 1ರಂತೆ ಭಾರತದಲ್ಲಿ 50 ಜನರ ಮೇಲೆ ಈ ಲಸಿಕೆಯ ಪ್ರಯೋಗ ಮಾಡಲಾಗಿದ್ದು ಉತ್ತಮ ಫಲಿತಾಂಶ ನೀಡಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ 30 ವರ್ಷದ ವ್ಯಕ್ತಿಯೊಬ್ಬನಿಗೆ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಕೊವಾಕ್ಸಿನ್ ನೀಡಲಾಗಿದ್ದು ಆರಂಭಿಕ ಎರಡು ಗಂಟೆಗಳು ಆತನನ್ನು ಪರೀಕ್ಷಿಸಲಾಯಿತು. ಈ ಬಗ್ಗೆ ಮಾಹಿತಿ ನೀಡಿದ ಏಮ್ಸ್ನ ಸಮುದಾಯ ಔಷಧದ ಪ್ರಾಧ್ಯಾಪಕ ಡಾ. ಪುನೀತ್ ಮಿಶ್ರಾ ಅವರು, ಈ ವ್ಯಕ್ತಿಯ ಮೇಲೆ ಕೊರೊನಾ ಲಸಿಕೆಯ ಪರಿಣಾಮದ ಬಗ್ಗೆ ಪರೀಕ್ಷಿಸಲು ಒಂದು ವರ್ಷಕ್ಕೂ ಅಧಿಕ ಕಾಲ ಆಸ್ಪತ್ರೆಯ ಪರಿಶೀಲನೆಗೆ ಒಳಗಾಗಬೇಕಾಗಿದೆ ಎಂದು ತಿಳಿಸಿದ್ದರು.
ಇನ್ನು ಈ ಲಸಿಕೆಯನ್ನು ದೇಶದಾದ್ಯಂತ ಮೂರು ವೈದ್ಯಕೀಯ ಸಂಸ್ಥೆಗಳಲ್ಲಿ ಕ್ಲಿನಿಕಲ್ ಟ್ರಯಲ್ ಹಂತ 1 ಸುತ್ತಿನಲ್ಲಿ ನಡೆಸಲಾಗುತ್ತಿದೆ.