ನವದೆಹಲಿ,ಜು 26 (Daijiworld News/MSP): ಭಾರತೀಯರು ಸ್ವಾವಲಂಬಿಗಳಾಗಬೇಕಾದ ಅನಿವಾರ್ಯತೆ ನಮ್ಮ ಮುಂದಿದ್ದು ದೇಶದ ಜನತೆ ಸ್ವಾವಲಂಬಿ ಭಾರತ ಕಟ್ಟಲು ಒಂದಾಬೇಕು ಎಂದು ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸುವ ಮೂಲಕ ಮಾತು ಆರಂಭಿಸಿದ ಪ್ರಧಾನಿ, ಸ್ವಾವಲಂಬಿ ಬದುಕಿಗೆ ಲಡಾಖ್ ಜನರು ಮಾದರಿಯಾಗಿದ್ದಾರೆ. ದೇಶದ ಜನತೆ ಸ್ವಾವಲಂಬಿಗಳಾಗುವುದು ಅನಿವಾರ್ಯತೆ ಇದೆ. ದೇಶದಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಳವಾಗಬೇಕಿದೆ. ನಮಗೆ ಬೇಕಾದ ವಸ್ತುಗಳನ್ನು ನಾವೇ ತಯಾರಿಸಬೇಕಾಗಿದೆ. ಭಾರತ ವೇಗವಾಗಿ ಬಬದಲಾಗುತ್ತಿದೆ. ಅಭಿವೃದ್ಧಿಯಾಗುತ್ತಿದೆ. ದೇಶವನ್ನು ಕಟ್ಟುವಲ್ಲಿ ಯುವಕರು ಇನ್ನಷ್ಟು ತೊಡಗಿಸಕೊಳ್ಳಬೇಕು. ಭಾರತದ ಭವಿಷ್ಯ ದೇಶದ ಯುವಕರ ಕೈಯಲ್ಲಿದೆ.ಯುವಕರು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಇದೇ ವೇಳೆ ಕೊರೊನಾ ಸಾಂಕ್ರಮಿಕ ರೋಗದ ಬಗ್ಗೆ ಮಾತನಾಡಿದ ಅವರು, ಪ್ರಪಂಚದ ಇತರ ದೇಶಗಳಿಗೆ ಹೊಲೀಕೆ ಮಾಡಿದ್ರೆ ಕೊರೊನಾ ವೈರಸ್ ಸೋಂಕಿನಿಂದ ಚೇತರಿಕೆ ಕಾಣುವವರ ಸಂಖ್ಯೆ ನಮ್ಮ ದೇಶದಲ್ಲಿ ಹೆಚ್ಚಿದೆ. ಹಾಗೆಂದು ಸೋಂಕನ್ನು ನಿರ್ಲಕ್ಷಿಸುವಂತಿಲ್ಲ. ಈಗಲೂ ಅಪಾಯಕಾರಿದ್ದು, ಪರಸ್ಪರ ಒಬ್ಬರಿಗೊಬ್ಬರು ನೆರವಾಗುತ್ತಾ ಕೊರೊನಾ ವಿರುದ್ಧ ಹೋರಾಡಬೇಕಾಗಿದೆ. ಸೋಂಕಿನ ವಿರುದ್ದ ಹೋರಾಡದೆ ಬೇರೆ ದಾರಿ ಇಲ್ಲ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ನಿಮ್ಮ ಜೀವದ ಜೊತೆ ಇನ್ನೊಬ್ಬರ ಜೀವ ಉಳಿಸಿ ಎಂದು ಮನವಿ ಮಾಡಿದರು.
ಮಾಸ್ಕ್ ಧರಿಸಲು ಕಿರಿಕಿಯಾಗಿ ಮಾಸ್ಕ್ ತೆಗೆಯಬೇಕು ಎಂದು ಎಂದು ಅನ್ನಿಸುವಾಗಲೆಲ್ಲಾ ಒಮ್ಮೆ ನಮಗಾಗಿ 8 ರಿಂದ 10 ಗಂಟೆ ಕೆಲಸ ಮಾಡುವ ಡಾಕ್ಟರ್ ಸೇರಿದಂತೆ ಕೊರೊನಾ ವಾರಿಯರ್ಸ್ಗಳನ್ನು ನೆನಪು ಮಾಡಿಕೊಳ್ಳಿ ಎಂದು ಹೇಳಿದರು.