ಜೈಪುರ, ಜು. 26 (DaijiworldNews/MB) : ರಾಜಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಹದಗೆಡುತ್ತಲ್ಲೇ ಇದ್ದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿದ್ದಾರೆ.
ಶನಿವಾರ ರಾಜಸ್ಥಾನ ರಾಜಭವನದ ಮುಂದೆಯೇ ಧರಣಿ ಕುಳಿತಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಈಗ ಅನಿವಾರ್ಯತೆ ಸೃಷ್ಟಿಯಾದರೆ ಪ್ರಧಾನಿ ನರೇಂದ್ರ ಮೋದಿಯವರ ನಿವಾಸಕ್ಕೂ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಅಗತ್ಯ ಬಿದ್ದಲ್ಲಿ ಕಾಂಗ್ರೆಸ್ ಶಾಸಕರು ರಾಷ್ಟ್ರಪತಿಗಳನ್ನು ಭೇಟಿಯಾಗುತ್ತೇವೆ. ಹೊಟೇಲ್ನಲ್ಲಿ ಹೆಚ್ಚು ಸಮಯಗಳು ಉಳಿಯಲು ಸಿದ್ಧರಾಗಿರಿ ಎಂದು ಪಕ್ಷದ ಶಾಸಕರಿಗೆ ಕೂಡಾ ಹೇಳಿದ್ದಾರೆ.
ರಾಜ್ಯಪಾಲ ಕಲ್ರಾಜ್ ಮಿಶ್ರಾ ಶುಕ್ರವಾರ ಅಧಿವೇಶನ ಕರೆಯಲು ನಕಾರ ಎತ್ತಿದ ಕಾರಣ ಕಾಂಗ್ರೆಸ್ ಶಾಸಕರು ರಾಜಭವನದ ಮುಂಭಾಗದ ಹುಲ್ಲು ಹಾಸಿನ ಮೇಲೆ ಧರಣಿ ಕುಳಿತ್ತಿದ್ದರು. ಹಾಗೆಯೇ ಅಧಿವೇಶನ ಕರೆಯುವಂತೆ ಘೋಷಣೆಯನ್ನೂ ಕೂಡಾ ಕೂಗಿದ್ದರು. ಬಳಿಕ ಶುಕ್ರವಾರ ರಾತ್ರಿ ಧರಣಿಯನ್ನು ಹಿಂಪಡೆದಿದ್ದರು.