ನವದೆಹಲಿ, ಜು 26 (DaijiworldNews/PY): ಜುಲೈ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೋಯ್ಡಾ, ಕೋಲ್ಕತ್ತಾ ಹಾಗೂ ಮುಂಬೈಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೊಧನಾ ಮಂಡಳಿಯ ಮೂರು ಹೈ-ಥ್ರೂಪುಟ್ ಲ್ಯಾಬ್ಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಐಸಿಎಂಆರ್ ವಿಶ್ವದ ಅತ್ಯಂತ ಹಳೇಯ ವೈದ್ಯಕೀಯ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಇದು ದೇಶದಲ್ಲಿ ಬಯೋಮೆಡಿಕಲ್ ಸಂಶೋಧನೆಯನ್ನು ಸಂಘಟಿಸಲು ಹಾಗೂ ಉತ್ತೇಜನ ಮಾಡಲು ನೆರವಾಗಿದೆ. ಇದು ದೇಶಾದ್ಯಂತ ಕೊರೊನಾ ಪರೀಕ್ಷೆ ಮಾಡಲು ಪ್ರತಿ ದಿನ ಸಹಾಯವಾಗುತ್ತಿದೆ.
ಈ ಮೂರು ಹೈ-ಥ್ರೋಪುಟ್ ಪರೀಕ್ಷಾ ಸೌಲಭ್ಯಗಳನ್ನು ನೋಯ್ಡಾ, ಕೋಲ್ಕತ್ತಾ ಹಾಗೂ ಮುಂಬೈಯಲ್ಲಿ ಸ್ಥಾಪಿಸಲಾಗಿದ್ದು, ಒಂದು ದಿನದಲ್ಲಿ 10,000ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.