ನವದೆಹಲಿ, ಜು 26 (DaijiworldNews/PY): ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಸೈನಿಕರಿಗೆ ಗೌರವಾರ್ಥವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೇನಾ ಆಸ್ಪತ್ರೆಗೆ ದೇಣಿಗೆಯಾಗಿ 20 ಲಕ್ಷ ರೂ.ಗಳನ್ನು ನೀಡಿದ್ದಾರೆ.
ರಾಷ್ಟ್ರಪತಿ ಅವರು, ಕೊರೊನಾ ಚಿಕಿತ್ಸೆಗಾಗಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳ ಖರೀದಿಗಾಗಿ ಈ ಹಣವನ್ನು ಆಸ್ಪತ್ರೆಗೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರಪತಿ ಭವನದ ಖರ್ಚಿನಲ್ಲಿ ಉಳಿತಾಯ ಮಾಡುವ ಮುಖಾಂತರ ಸೇನಾ ಆಸ್ಪತ್ರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 20 ಲಕ್ಷ ರೂ.ಗಳನ್ನು ದೇಣಿಯಾಗಿ ನೀಡಿದ್ದಾರೆ.
ಸೇನಾ ಆಸ್ಪತ್ರೆಗೆ ರಾಷ್ಟ್ರಪತಿ ಭವನ ಖರ್ಚಿನ ಉಳಿತಾಯದಲ್ಲಿ ನೀಡಲಾಗಿರುವ ಈ ದೇಣಿಗೆಯು ಯೋಧರಿಗೆ ಉತ್ತಮವಾದ ಅನುಕೂಲವಾದಂತಹ ವಾತಾವರಣವನ್ನು ಕಲ್ಪಿಸಿಕೊಡುವಂತಹ ಪ್ರಯತ್ನವನ್ನು ರಾಷ್ಟ್ರಪತಿಯವರು ಮಾಡಿದ್ದಾರೆ. ರಾಷ್ಟ್ರಪತಿ ಅವರ ಈ ಸಣ್ಣ ಪ್ರಯತ್ನದಿಂದ ಜನರು, ಸಂಸ್ಥೆಗಳೂ ಕೂಡಾ ಸ್ಪೂರ್ತಿಪಡೆದು ಖರ್ಚನ್ನು ಕಡಿಮೆ ಮಾಡಿ, ಹಣ ಉಳಿತಾಯ ಮಾಡಬೇಕು. ಕೊರೊನಾ ವಾರಿಯರ್ಸ್ಗೆ ನೆರವಾಗಬೇಕು ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.