ಶ್ರೀನಗರ, ಜು 27 (DaijiworldNews/PY): ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಕುಪ್ವಾರ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದ ಮಾದಕ ವಸ್ತುಗಳ ಮಾರಾಟ ಜಾಲವನ್ನು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಇಬ್ಬರನ್ನು ಗುರುತಿಸಲಾಗಿದ್ದು, ತಂಗ್ಧರ್ ನಿವಾಸಿಗಳಾದ ಬಷೀರ್ ಅಹ್ಮದ್ ಶೇಖ್ ಹಾಗೂ ಅಬ್ದುಲ್ ಅಮಿತ್ ಶೇಖ್ ಎಂದು ಕುಪ್ವಾರದ ಎಸ್ಎಸ್ಪಿ ಶ್ರೀರಾಮ್ ದಿನಕರ್ ಹೇಳಿದ್ದಾರೆ. .
ಬಂಧಿಸಲ್ಪಟ್ಟ ಮೂವರು ಆರೋಪಿಗಳಿಂದ 50 ಕೋಟಿ. ರೂ.ಗಳ ಮಾದಕ ವಸ್ತುಗಳು ಸೇರಿದಂತೆ 10 ಕೆ.ಜಿ ಬ್ರೌನ್ ಶುಗರ್, ಮದ್ದುಗುಂಡು ಹಾಗೂ ಎರಡು ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕುಪ್ವರಾ ಪ್ರದೇಶದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲವಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು, ಸೇನೆಯ ಶ್ವಾನಗಳ ಮೂಲಕ ತಂಗ್ಧರ್ ಸಮೀಪದ ಸಧ್ನಾ ಪಾಸ್ ಬಳಿ ಕಾರ್ಯಾಚರಣೆ ನಡೆಸಿದ್ದು, ಮಾದಕ ವಸ್ತು ಸೇರಿದಂತೆ ಶಸ್ತ್ರಾಸ್ತ್ರಗಳ ಅಡಗುದಾಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.