ನವದೆಹಲಿ, ಜು 27 (DaijiworldNews/PY): ಕೇಂದ್ರ ಸರ್ಕಾರವು 59 ಚೀನಾ ಆ್ಯಪ್ಗಳನ್ನು ನಿಷೇಧಿಸಿದ ಬೆನ್ನಲ್ಲೇ, ಈಗ ಚೀನಾದ 47 ಆ್ಯಪ್ಗಳನ್ನು ನಿಷೇಧಿಸಿದೆ ಎಂದು ವರದಿಯಾಗಿದೆ.
ಚೀನಾದ ಈ 47 ಆ್ಯಪ್ಗಳು ಭಾರತೀಯ ನಾಗರೀಕರ ಖಾಸಗಿತನವನ್ನು ದುರ್ಬಳಕೆ ಮಾಡುತ್ತಿರುವ ನಿಟ್ಟಿನಲ್ಲಿ ನಿಷೇಧಿಸಲು ಕೇಂದ್ರ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ.
250 ಆ್ಯಪ್ಗಳ ಪಟ್ಟಿಯನ್ನು ಮಾಡಿದ್ದು, ಇದು ರಾಷ್ಟ್ರೀಯ ಭದ್ರತೆ ಹಾಗೂ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುವ ಆ್ಯಪ್ಗಳಾಗಿದ್ದು, ಇದರ ಪರಿಶೀಲನೆ ನಡೆಯುತ್ತಿದೆ. ಈ ಪಟ್ಟಿಯಲ್ಲಿ ಅಧಿಕ ಚೀನಾದ ಆ್ಯಪ್ಗಳಿವೆ ಎನ್ನಲಾಗಿದೆ.
ಈ ಪಟ್ಟಿಯಲ್ಲಿ ಪಬ್ ಜೀ ಗೇಮಿಂಗ್ ಆ್ಯಪ್ಗಳಿದ್ದು, ಈ ಗೇಮಿಂಗ್ ಆ್ಯಪ್ಗಳು ಡೇಟಾವನ್ನು ಚೀನಾದ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳುತ್ತಿವೆ ಎಂಬುದಾಗಿ ಸರ್ಕಾರದ ಮೂಲಗಳು ಹೇಳಿವೆ.
ಈ 47 ಆ್ಯಪ್ಗಳು ಈ ಹಿಂದೆ ನಿಷೇಧಿಸಲಾದ ಆ್ಯಪ್ಗಳ ಲೈಟ್ ವರ್ಷನ್ಗಳಾಗಿದ್ದು, ಯಾವೆಲ್ಲಾ ಆ್ಯಪ್ಗಳನ್ನು ನಿಷೇಧಿಸಿದೆ ಎನ್ನುವ ಮಾಹಿತಿ ಇನ್ನು ತಿಳಿಯಬೇಕಿದೆ.